

ರಾಯಚೂರು ಪೊಲೀಸ್ ಇಲಾಖೆಯಲ್ಲಿ ವಿಶೇಷ ಸಾಧನೆ ಗುರುತಿಸಿ ರಾಯಚೂರು ಉಪ ವಿಭಾಗದ ಡಿವೈಎಸ್ಪಿ ಶಾಂತವೀರ ಈ. ಅವರಿಗೆ 2025 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜಿನಾರಾಗಿದ್ದಾರೆ.
ಮೂಲತಃ ಚಿತ್ರದುರ್ಗ ಜಿಲ್ಲೆಯ ಕೊಡಲಹಳ್ಳಿಯ ಗ್ರಾಮದವಾರದ ಶಾಂತವೀರ ಈ. 2017 ರಲ್ಲಿ ಡಿವೈಎಸ್ಪಿ (ಸಿವಿಲ್) ಹುದ್ದೆಗೆ ನೇಮಕಾತಿ ಹೊಂದಿ ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರಿನಲ್ಲಿ ಬುನಾದಿ ತರಬೇತಿಯನ್ನು ಪಡೆದಿರುತ್ತಾರೆ. ತರಬೇತಿ ಅವಧಿಯಲ್ಲಿ ಹೊರಾಂಗಣ ಮತ್ತು ಒಳಾಂಗಣ ತರಬೇತಿಗಳಲ್ಲಿ ಗರಿಷ್ಠ ಹಾಜರಾತಿ ಪಡೆದ ಬಗ್ಗೆ, ಲೀಡರ್‌ಶಿಪ್ ಮತ್ತು ಇನ್ಸಾಲ್‌ಮೆಂಟ್‌ನಲ್ಲಿ ಉತ್ತಮ ಕಾರ್ಯ ನಿರ್ವಹಿಸಿ, ತುಮಕೂರು ಜಿಲ್ಲೆಯಲ್ಲಿ ಪ್ರೊಬೆಷನರ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ನಂತರ 2020 ರಿಂದ 2025 ರವರೆಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ,ಬಾಗಲಕೋಟೆ ಜಿಲ್ಲೆಯ ಜಮಖಂಡಿ ಉಪ-ವಿಭಾಗ ಸೇವೆ ಸಲ್ಲಿಸಿದ್ದು, 2025 ಮಾರ್ಚ್ 25ರಿಂದ ರಾಯಚೂರು ಉಪ ವಿಭಾಗದ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ತ್ವರಿತವಾಗಿ ಕೊಲೆ, ದರೋಡೆ ಸೇರಿದಂತೆ ವಿವಿಧ ಪ್ರಕರಣಗಳ ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದನ್ನು ಗುರುತಿಸಿ ಸರ್ಕಾರ ಸಿಎಂ ಪದಕಕ್ಕೆ ಆಯ್ಕೆ ಮಾಡಿದ್ದು, ಏ.2ರಂದು ಪ್ರದಾನ ಮಾಡಲಾಗುತ್ತದೆ.