ಶೌಚಗೃಹ ಜಾಗ ಒತ್ತುವರಿ ತೆರವುಗೊಳಿಸಿ

ಕವಿತಾಳದ 10ನೇ ವಾರ್ಡ್‌ನಲ್ಲಿ ಮಹಿಳೆಯರು ಕೈಗೊಂಡ ಪ್ರತಿಭಟನಾ ಸ್ಥಳಕ್ಕೆ ಹೋರಾಟಗಾರ ಆರ್. ಮಾನಸಯ್ಯ ಭೇಟಿ ನೀಡಿ ಚರ್ಚಿಸಿದರು. ಪ್ರಮುಖರಾದ ಅಮರೇಶ ಕಟ್ಟಿಮನಿ, ಹುಚ್ಚಪ್ಪ ವಡವಟ್ಟಿ, ಅಯ್ಯಪ್ಪ ನಿಲೋಗಲ್, ಯಲ್ಲಪ್ಪ ಕೊಡ್ಲಿ, ಸಂಗಮ್ಮ, ನಾಗಮ್ಮ, ಮಲ್ಲಮ್ಮ, ಲಕ್ಷ್ಮೀ ಇತರರಿದ್ದರು.

Published on
ಕವಿತಾಳ: ಪಟ್ಟಣದ 10ನೇ ವಾರ್ಡ್‌ನ ಸಾಮೂಹಿಕ ಶೌಚಗೃಹ ಜಾಗ ಒತ್ತುವರಿ ಮಾಡಿದ್ದು ತೆರವುಗೊಳಿಸಬೇಕೆಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿದರು. 
ಸ್ಥಳಕ್ಕೆ ಭೇಟಿ ನೀಡಿದ ರೈತ ಹೋರಾಟಗಾರ ಆರ್.ಮಾನಸಯ್ಯ ಮಾತನಾಡಿ, ಇಲ್ಲಿನ ಶೌಚಗೃಹವನ್ನು 7 ರಿಂದ 11 ನೇ ವಾರ್ಡ್ ಮಹಿಳೆಯರು ಹಲವು ವರ್ಷಗಳಿಂದ ಬಳಸುತ್ತಿದ್ದಾರೆ. ಸರ್ವೇ ನಂ.8/2ರ 1.8 ಎಕರೆ ಜಾಗದಲ್ಲಿ ನಿರ್ಮಿಸಿದ್ದ ಕಾಂಪೌಂಡನ್ನು ಕೆಲವರು ತೆರವುಗೊಳಿಸಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಪಪಂ ಅಧಿಕಾರಿಗಳು ಕೂಡಲೇ ಸರ್ವೇ ನಡೆಸಿ 5 ದಿನದೊಳಗಾಗಿ ಸಮಸ್ಯೆ ಪರಿಹರಿಸಬೇಕು .ಇಲ್ಲದಿದ್ದರೆ ರೈತ ಸಂಘದೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಪಂ ಮುಖ್ಯಾಧಿಕಾರಿ ಜಸ್ಪಾಲ್ ಸಿಂಗ್ ಮಾತನಾಡಿ,  2021ರಿಂದ ಸಮಸ್ಯೆಯಾಗಿದ್ದು, ಆಗಲೇ ಪರಿಹರಿಸಬೇಕಾಗಿತ್ತು. ಜಾಗದ ಸರ್ವೇ ನಡೆಸಲು ತಿಳಿಸಿದ್ದೇನೆ. ಸಮೀಕ್ಷೆ ಮುಗಿದು ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರಮುಖರಾದ ಅಮರೇಶ ಕಟ್ಟಿಮನಿ, ಹುಚ್ಚಪ್ಪ ವಡವಟ್ಟಿ, ಅಯ್ಯಪ್ಪ ನಿಲೋಗಲ್, ಯಲ್ಲಪ್ಪ ಕೊಡ್ಲಿ, ಮೌನೇಶ ಹಿರೇಕುರುಬರ, ಮಲ್ಲಪ್ಪ ಕಲಾಶೆಟ್ಟಿ, ಕರಿಯಪ್ಪ ಅಡ್ಡೆ, ಈರಣ್ಣ ಕೆಳಗೇರ, ಸಂಗಮ್ಮ, ನಾಗಮ್ಮ, ಮಲ್ಲಮ್ಮ, ಲಕ್ಷ್ಮೀ, ಬಸಮ್ಮ, ಮಾನಸಮ್ಮ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net