ನಾಲೆ ಸ್ವಚ್ಛಗೊಳಿಸಿ ನೀರು ಹರಿಸಿ

ಮಾನ್ವಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆಗೆ ಬಿಜೆಪಿ ತಾಲೂಕು ಘಟಕ ಮನವಿ ಸಲ್ಲಿಸಲಾಯಿತು.  ವೀರಭದ್ರ ಗೌಡ ಭೋಗಾವತಿ ಗುರು ಸಿದ್ದಪ್ಪ ಕಣ್ಣೂರ, ತಾಯಣ್ಣ ಕಿನ್ನಾರಿ ಇತರರಿದ್ದರು.
ಮಾನ್ವಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆಗೆ ಬಿಜೆಪಿ ತಾಲೂಕು ಘಟಕ ಮನವಿ ಸಲ್ಲಿಸಲಾಯಿತು. ವೀರಭದ್ರ ಗೌಡ ಭೋಗಾವತಿ ಗುರು ಸಿದ್ದಪ್ಪ ಕಣ್ಣೂರ, ತಾಯಣ್ಣ ಕಿನ್ನಾರಿ ಇತರರಿದ್ದರು.
Published on
ಮಾನ್ವಿ: ತುಂಗಭದ್ರಾ ಜಲಾಶಯದಿಂದ ಕಾಲುವೆ ಮೂಲಕ ಪಟ್ಟಣದ ರಬ್ಬಣಕಲ್ ಕೆರೆಗೆ ನೀರು ಹರಿಸುವ ಮೊದಲು ನಾಲೆ ತ್ಯಾಜ್ಯ ತೆರವುಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ತಾಲೂಕು ಘಟಕ ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆಗೆ ಮನವಿ ಸಲ್ಲಿಸಿತು.
ಬಿಜೆಪಿ ತಾಲೂಕು ಅಧ್ಯಕ್ಷ ವೀರಭದ್ರಗೌಡ ಭೋಗಾವತಿ ಮಾತನಾಡಿ, ರಬ್ಬಣಕಲ್ ಕೆರೆಯಿಂದ ಮಾನ್ವಿ ಪಟ್ಟಣದ ಜನರಿಗೆ ಕುಡಿವ ನೀರು ಪೂರೈಸಲಾಗುತ್ತಿದೆ. ಆದರೆ ಕಾಲುವೆಯಲ್ಲಿ ಚರಂಡಿ ನೀರು, ಕಸ ಇತರ ತ್ಯಾಜ್ಯ ಇರುವುದರಿಂದ ಕೆರೆ ನೀರು ಮಲಿನವಾಗಿದೆ. ಇದರಿಂದ ಮಾರಕ ಕಾಯಿಲೆಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಕಾಲುವೆ ಸ್ವಚ್ಛಗೊಳಿಸಬೇಕೆಂದು ಆಗ್ರಹಿಸಿದರು.
ಜುಮ್ಮೊಲದೊಡ್ಡಿ ಏರಿಯಾದಲ್ಲಿ ಸುಮಾರು 15 ಲಕ್ಷ ಲೀ. ನೀರಿನ ಟ್ಯಾಂಕ್ ನಿರ್ಮಾಣವಾಗಿ ವರ್ಷ ಗತಿಸಿದರೂ ಸುತ್ತಲಿನ ವಾರ್ಡ್‌ಗಳ ಜನರಿಗೆ ನೀರು ಪೂರೈಸುವಲ್ಲಿ ಪುರಸಭೆ ವಿಫಲವಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರು ಪೂರೈಸಬೇಕೆಂದು ಒತ್ತಾಯಿಸಿದರು. ಮಾನ್ವಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಕಣ್ಣೂರ, ತಾಯಣ್ಣ ಕಿನ್ನಾರಿ, ಕರೀಂ ಪಾಟೀಲ್, ಸುದರ್ಶನ, ನಾಗರಾಜ ಭಂಡಾರಿ, ಶಿವಕುಮಾರ, ರವಿಕುಮಾರ, ಸಾಹುಕಾರ ಈರಣ್ಣ, ಸಿದ್ದಯ್ಯ ಸ್ವಾಮಿ, ರಾಜಶೇಖರ ಕಪಗಲ್, ಸುರೇಶ ಜೋತನ್, ಚನ್ನಬಸವ ಜಾನೇಕಲ್, ದೊಡ್ಡಣ್ಣ ಹೂಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net