ಮಕ್ಕಳ ಆಯೋಗದಿಂದ ನಿಯಮ ಉಲ್ಲಂಘನೆಯ ಆರೋಪ

ಜೆ.ಬಿ.ರಾಜು
ಜೆ.ಬಿ.ರಾಜು
Published on

ರಾಯಚೂರು.

ರಾಜ್ಯಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಾತಿಯಲ್ಲಿ ನೇಮಕಾತಿ ಉಲ್ಲಂಘನೆ, ಅನರ್ಹರನ್ನು ನೇಮಿಸಲಾಗಿದ್ದು, ಕೂಡಲೇ ರದ್ದುಪಡಿಸಬೇಕೆಂದು ಜನಪರ ಸಂಘಟನೆಗಳ ವೇದಿಕೆ ಸಂಚಾಲಕ ಜೆ.ಬಿ.ರಾಜು ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮಕ್ಕಳ ಆಯೋಗ ಕಾಯ್ದೆ 2005 ರ ಅಡಿಯಲ್ಲಿ ಸ್ಥಾಪಿಸಲಾದ ಕಾನೂನು ಬದ್ದ ಸಂಸ್ಥೆಯಾಗಿದೆ.

ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ಸಂದರ್ಭದಲ್ಲಿ ಹತ್ತು ವರ್ಷಗಳ ಮಕ್ಕಳ ಕಲ್ಯಾಣ, ಹಕ್ಕುಗಳ ರಕ್ಷಣೆ ಕುರಿತಾಗಿಸೇವಾನುಭವ ಹೊಂದಿರಬೇಕು. ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸೇವಾ ಮಾಡಿರುವ ಸಾಧನೆಗಳಿರಬೇಕು. ಆದರೆ ಮೇ.27 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಅರ್ಹತಾ ಮಾನದಂಡಗಳನು ಹೊಂದಿರದೇ ಇರುವವ್ಯಕ್ತಿಗಳನ್ನು ನೇಮಿಸಿರುವ ಅವೈಜ್ಞಾನಿಕ, ನಿಯಮಬಾಹಿರವಾಗಿದೆ.

ಮಕ್ಕಳ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಆಗಿಲ್ಲ. ನಿಯಮಗಳನ್ನು ಪಾಲಿಸದೇ ನಿಯಮ ಉಲ್ಲಂಘಿಸಲಾಗಿದೆ. ಕೂಡಲೇ ರದ್ದುಗೊಳಿಸಿ ಹೊಸದಾಗಿ ಅರ್ಹರನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ನರಸಿಂಹಮೂರ್ತಿ, ವಿದ್ಯಾಪಾಟೀಲ್, ಕೆ.ಪಿ.ಅನಿಲ್‌ಕುಮಾರ, ಶರಣಬಸವ, ಜಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net