ರಾಘವೇಂದ್ರ ರೆಡ್ಡಿ ಎಂಬುವವರಿಗೆ ಇ-ಖಾತೆ ಮಾಡಿಕೊಡಲು ಮುಖ್ಯಾಧಿಕಾರಿ ಎರಡು ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಗುರುವಾರ ರಾತ್ರಿ ಅಡ್ವಾನ್ಸ್ ಆಗಿ ಒಂದು ಲಕ್ಷ ರೂ. ತೆಗೆದುಕೊಳ್ಳುವಾಗ ಲೋಕಾ ಎಸ್ಪಿ ಸಿದ್ದರಾಜು ನೇತೃತ್ವದ ತಂಡ ದಾಳಿ ನಡೆಸಿದೆ. ಲೋಕಾ ತಂಡ ಬರುತ್ತಿದ್ದಂತೆ ಗಾಬರಿಗೊಂಡ ಸುರೇಶ ಶೆಟ್ಟಿ ಕವಿತಾಳ ಪಟ್ಟಣದತ್ತ ಪರಾರಿಯಾಗಲು ಯತ್ನಿಸಿದ್ದಾರೆ. ಜಾಗೃತರಾದ ಅಧಿಕಾರಿಗಳು ಅವರನ್ನು ಹಿಂಬಾಲಿಸಿ ಅಂತಿಮವಾಗಿ ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭ ಲೋಕಾ ಡಿವೈಎಸ್ಪಿ ಪುರುಷೋತ್ತಮ, ಸಿಬ್ಬಂದಿ ವಿಜಯಕುಮಾರ, ಅಮರೇಶ ಇದ್ದರು.