ಗೊರೇಬಾಳದಲ್ಲಿ ಏರ್ಪಡಿಸಿದ್ದ ಶ್ರೀ ಚನ್ನಬಸವ ತಾತನ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಡಾ.ಸಿದ್ಧಲಿಂಗ ಶ್ರೀಗಳು, ಕಿರಿಯ ಶ್ರೀ ಬಸವಲಿಂಗ ಸ್ವಾಮೀಜಿ, ಯದ್ದಲದೊಡ್ಡಿಯ ಮಹಾಲಿಂಗ ಶ್ರೀಗಳು ಇತರರಿದ್ದರು.
ಗೊರೇಬಾಳ: ಮಹಾದಾಸೋಹಿ ಶರಣಬಸವೇಶ್ವರರ 47ನೇ ವರ್ಷದ ಹಾಗೂ ಒಳಬಳ್ಳಾರಿಯ ಶ್ರೀ ಚನ್ನಬಸವ ತಾತನ 20ನೇ ವರ್ಷದ ಜಾತ್ರೆ ಮತ್ತು ನೂತನ ರಥ ಲೋಕಾರ್ಪಣೆ ನಿಮಿತ್ತ ಏರ್ಪಡಿಸಿದ್ದ ಚನ್ನಬಸವ ತಾತನ ಪುರಾಣ ಪ್ರವಚನ ಶನಿವಾರ ಸಂಜೆ ಮಹಾಮಂಗಲಗೊಂಡಿತು.
ಸಾನ್ನಿಧ್ಯವಹಿಸಿದ್ದ ಸುವರ್ಣಗಿರಿ ವಿರಕ್ತಮಠ ಒಳಬಳ್ಳಾರಿಯ ಡಾ.ಸಿದ್ಧಲಿಂಗ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರೂ ಮಹನೀಯರ ಪುರಾಣ ಪ್ರವಚನ ಆಲಿಸಬೇಕು. ಭಕ್ತರ ಹೃದಯದಲ್ಲಿ ಮಹಾತ್ಮರ ಆದರ್ಶ ತುಂಬಿಕೊಳ್ಳಬೇಕು ಎಂದರು.
ಬಳಿಕ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಶ್ರೀಗಳು, ಒಳಬಳ್ಳಾರಿ ಸುವರ್ಣಗಿರಿ ವಿರಕ್ತ ಮಠದ ಕಿರಿಯ ಶ್ರೀ ಬಸವಲಿಂಗ ಸ್ವಾಮೀಜಿ, ಅಡವಿಅಮರೇಶ್ವರ ಮಠದ ತೋಂಟದಾರ್ಯ ಶ್ರೀಗಳು, ಬೂದಗುಂಪು ಕೊಟ್ಟೂರು ಶಾಖಾಮಠದ ಸಿದ್ಧೇಶ್ವರ ಶ್ರೀಗಳು ಇತರರಿದ್ದರು.