ಅಂತ್ಯೋದಯ ಅನ್ನ ಯೋಜನೆಯಲ್ಲಿ ಈ ಬಾರಿ ಪ್ರತಿ ಕಾರ್ಡ್‌ಗೆ ಮೇ ತಿಂಗಳಿಗೆ 35 ಕೆಜಿ, ಜೂನ್ ತಿಂಗಳ 35 ಕೆಜಿ ಒಟ್ಟು 70 ಕೆಜಿ ಅಕ್ಕಿ ಮೇನಲ್ಲಿ ವಿತರಣೆ ಮಾಡಬೇಕು. ಅನ್ನಭಾಗ್ಯ ಅಕ್ಕಿ ವಿತರಣೆ ಇಲ್ಲದ ಕಾರಣ ಯುನಿಟ್ ರೀತಿಯ ಹಂಚಿಕೆ ಈ ಬಾರಿ ಇರುವುದಿಲ್ಲ. ಅಲ್ಲದೆ ಎರಡು ತಿಂಗಳದು ಪ್ರತ್ಯೇಕವಾಗಿ ಬಯೋಮೆಟ್ರಿಕ್ ಕಡ್ಡಾಯವಾಗಿ ಪಡೆದುಕೊಳ್ಳಬೇಕು.