ಮಂತ್ರಾಲಯದ ಶ್ರೀ ರಾಘವೇಂದ್ರಸ್ಚಾಮಿ ಮಠದಲ್ಲಿ ಗುರು ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಶ್ರೀಮಠದ ಪೀಠಾಪತಿ ಶ್ರೀ ಸುಬುಧೇಂದ್ರ ತೀರ್ಥರು ಗುರುವಾರ ಸಂಜೆ ಗೋವು, ಆಶ್ವ ಪೂಜೆ ಸಲ್ಲಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ವಿವಿಧ ಪೂಜೆ
-ವಿಶ್ವಕ್ಕೆ ರಾಯರೊಬ್ಬರೇ ಗುರು
ರಾಯಚೂರು
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುರಾಯರ 355ನೇ ಆರಾಧನೆ ಮಹೋತ್ಸವಕ್ಕೆ ಶ್ರೀಮಠದ ಪೀಠಾಪತಿ ಡಾ.ಸುಬುಧೇಂದ್ರ ತೀರ್ಥರು ಗುರುವಾದ ಸಂಜೆ ವಿದ್ಯುಕ್ತ ಚಾಲನೆ ನೀಡಿದರು.
ಮೊದಲಿಗೆ ರಾಯರ ಮೂಲ ಬೃಂದಾವನ, ಮಂಚಲಮ್ಮಗೆ ವಿಶೇಷ ಪೂಜೆ ಸಲ್ಲಿಸಿ, ಶ್ರೀಮಠದ ಮುಂಭಾಗದಲ್ಲಿ ಪೀಠಾಪತಿ ಶ್ರೀ ಸುಬುಧೇಂದ್ರ ತೀರ್ಥರು ಗೋವು, ಅಶ್ವ ಪೂಜೆ ಹಾಗೂ ಧ್ವಜಾರೋಹಣ ನೆರವೇರಿಸಿ ಏಳು ದಿನಗಳ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಯೋಗಿಂಧ್ರ ಸಭಾ ಮಂಟಪದಲ್ಲಿ ಆಶೀರ್ವಚನ ನೀಡಿ, ಕಲಿಯುಗದ ಕಾಮದೇನು, ಕಲ್ಪವೃಕ್ಷರಾದ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸದ ನಿಮಿತ್ತ ಸಪ್ತರಾತ್ರೋತ್ಸವ ಆರಂಭವಾಗಿದೆ. ಈಗಾಗಲೇ ಗೋಪೂಜೆ, ಅಶ್ವಪೂಜೆ, ಧ್ವಜವಂದನೆ, ಧ್ವಜಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮಗಳು ಸಂಪನ್ನಗೋಂಡಿದ್ದು, ದೇಶ ಮತ್ತು ವಿದೇಶಗಳಲ್ಲಿರು ರಾಘವೇಂದ್ರ ಸ್ವಾಮಿಗಳ ಮಠಗಳು, ಸನ್ನಿಧಾನಗಳಲ್ಲಿ ವೈಭವದಿಂಸ ಆರಾಧನಾ ಮಹೋತ್ಸವ ಜರುಗಲಿದೆ ಎಂದರು.
ಗುರು ರಾಯರು ಅಪಾರ ಮಹಿಮಾ ಸಂಪನ್ನರಾದ, ಭಕ್ತರಿಗೆ ಸುಲಭವಾಗಿ ದೊರೆತು ಅನುಗ್ರಹಿಸುವ ರಾಯರು ತಮ್ಮ ಯೋಗ ಶಕ್ತಿಯಿಂದ ಬೃಂದಾವನದಲ್ಲಿ ಅಧ್ಯಾಪೀಠಾರೂಢರಾಗಿ ನೆಲೆಸಿದ್ದಾರೆ. ತಮ್ಮ ಬಳಿಗೆ ಬರುವ ಎಲ್ಲಾ ಭಕ್ತರ ಪುಸ್ತಕಾರ್ಪಣೆಗಳನ್ನು ಸ್ವೀಕರಿಸುವುದರ ಜತೆಗೆ, ಅತೀಂದ್ರಿಯ ಶಕ್ತಿಯ ಮೂಲಕ ಧರ್ಮ ಮತ್ತು ಭಗವಂತನ ಬಗ್ಗೆ ವಿಶೇಷ ಜಾಗೃತಿಯನ್ನು ಮೂಡಿಸುತ್ತಾ ಸನಾತನ ಹಿಂದೂ ಧರ್ಮದ ಪರಿರಕ್ಷಣೆಗೋಸ್ಕರವೇ ಅವರು ಕ್ಷೇತ್ರದಲ್ಲಿ ನೆಲೆಸಿದ್ದಾರೆ.
ತಮ್ಮ ಯತಿಪೀಠ, ಆರಾಧನಾ ಕಾರ್ಯ ಹಾಗೂ ಸಾಧನೆಗಳು ಪರಿಪೂರ್ಣವಾಗಿದ್ದರೂ, ಭಕ್ತರಿಗೆ ಹೆಚ್ಚಿನ ಪುಣ್ಯವನ್ನು ಕರುಣಿಸಲು ಹಾಗೂ ಎಲ್ಲಾ ಸಾಧಕರುಗಳನ್ನು ಭಗವಂತನ ಪಾದಪದ್ಮಗಳಿಗೆ ಕರೆದುಕೊಂಡು ಹೋಗುವ ವಿಶಿಷ್ಟ ಹಾಗೂ ಸಾಮೂಹಿಕ ಜವಾಬ್ದಾರಿಯನ್ನು ಹೊತ್ತಿರುವ ವಿಶ್ವದ ಏಕೈಕ ಗುರುಗಳು ಶ್ರೀ ರಾಘವೇಂದ್ರ ಸ್ವಾಮಿಗಳಾಗಿದ್ದಾರೆ ಎಂದರು.
ಇಂದಿನ ಸ್ವಾರ್ಥತೆ, ಅಹಂಕಾರ-ಮಮಕಾರಗಳು, ಮತಗಲಿಕೆ, ಅಶಾಂತಿ ಮತ್ತು ದೃಷ್ಟತನ ಸಮಸ್ಯೆಗಳು ಜಗತ್ತಿನ ಎಲ್ಲೆಡೆ ವ್ಯಾಪಿಸಿರುವಾಗ, ಶಾಂತಿ-ಸೌಹಾರ್ದತೆ ಹಾಗೂ ಆಸ್ತಿಕತೆಯನ್ನು ಎಲ್ಲೆಡೆ ಮೂಡಿಸಲು ಶ್ರೀ ಗುರುಗಳು ಅತ್ಯಂತ ಸಮರ್ಥರಾಗಿದ್ದಾರೆ. ವಿವಿಧ ದೇವತಾ ಸಂಧಾನಯುಕ್ತರಾಗಿ ಮತ್ತು ಸಮಸ್ತ ಗುರು ಪರಂಪರಾ ಯುಕ್ತರಾಗಿ ಅವರು ವಿಶ್ವದ ಏಕೈಕ ಮಹಾಗುರುಗಳಾಗಿ ಮಾರ್ಪಟ್ಟಿದ್ದಾರೆ. ಇಂದು ವಿಶ್ವದ ಎಲ್ಲಾ ಜನಾಂಗಗಳು ಜಾತ್ಯತೀತವಾಗಿ ಆಚರಿಸುವ ಹಾಗೂ ಅನುಗ್ರಹ ಪಡೆಯುವ ಏಕೈಕ ಗುರುಗಳೆಂದರೆ ಶ್ರೀ ರಾಘವೇಂದ್ರ ಸ್ವಾಮಿಗಳವರು. ಪ್ರತ್ಯೇಕ ಹಬ್ಬಗಳು ಹಾಗೂ ಉತ್ಸವಗಳನ್ನು ಆಯಾ ಪ್ರಾಂತದ ಜನತೆ ಆಚರಿಸಿದರೆ, ವಿಶ್ವದ ಎಲ್ಲೆಡೆಯಲ್ಲಿ ಆಚರಿಸಲ್ಪಡುವ ವಿಶ್ವದ ಏಕೈಕ ಹಬ್ಬ, ಉತ್ಸವ ಮತ್ತು ಆರಾಧನೆ ಎಂದರೆ ಅದು ರಾಘವೇಂದ್ರ ಸ್ವಾಮಿಗಳವರ ಆರಾಧನಾ ಮಹೋತ್ಸವವಾಗಿದೆ. ಈ ಆರಾಧನಾ ಕಾರ್ಯಕ್ರಮವು ಕೇವಲ ಮಂತ್ರಾಲಯದಲ್ಲಿ ಮಾತ್ರವಲ್ಲದೆ, ದೇಶ-ವಿದೇಶಗಳ ಎಲ್ಲಾ ಭಾಗಗಳಲ್ಲಿ ಹಾಗೂ ಭಕ್ತರ ಪ್ರತಿಯೊಬ್ಬರ ಮನೆ-ಮನಗಳಲ್ಲಿ ಆಚರಿಸಲ್ಪಡುವ ಮಹಾ ಉತ್ಸವವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಆಡಳಿತಾಧಿಕಾರಿ ಮಾಧವ ಶೆಟ್ಟಿ, ಐಪಿ ನರಸಿಂಹ, ಶ್ರೀನಿಧಿ ಸೇರಿ ಸಾವಿರಾರು ಜನ ಭಕ್ತರು ಇದ್ದರು.
((ಪಂಚ ರಥಗಳ ರಥೋತ್ಸವ )) ರಾಘವೇಂದ್ರ ಸ್ವಾಮಿಗಳ ಆರಾಧನೆ ನೀಮಿತ್ತ ರಾಯರ ಮಠದ ಪ್ರಾರಂಗಣದಲ್ಲಿ ಆರಾಧನೆ ಮೊದಲ ದಿನವಾದ ಗುರುವಾರ ರಾತ್ರಿ ಶ್ರೀಮಠ ಪೀಠಾಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತ್ರತ್ವದಲ್ಲಿ ಗಜತ ವಾಹನೋತ್ಸವ, ರಥೋತ್ಸವ, ರಜತ ರಥೋತ್ಸವ, ಸುವರ್ಣ ರಥೋತ್ಸವ, ನವರತ್ನ ರಥೋತ್ಸವ ನೇರವೇರಿಸಿದರು. ಪಂಚಾ ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿರುವುದು ವಿಶೇಷವಾಗಿ ಕಂಡುಬಂದಿತು.