ಕೇಂದ್ರೀಯ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ

ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಮಾಜಿ ಯೋಧರಿಂದ ಹಮ್ಮಿಕೊಂಡಿದ್ದ ಕೇಂದ್ರೀಯ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘವನ್ನು ಇರಕಲ್‌ನ ಜಗದ್ಗುರು ಶಕ್ತಿಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ ಉದ್ಘಾಟಿಸಿದರು. ಕಲ್ಲೂರು ಶಂಕರಾಚಾರ್ಯ ಮಠದ ಶಿವರಾಮಾನಂದ ಭಾರತಿ ಸ್ವಾಮೀಜಿ, ಪ್ರಮುಖರಾದ ವೆಂಕನಗೌಡ, ಧರ್ಮಣ್ಣ, ಕೃಷಣಮೂರ್ತಿ, ಎನ್.ಪಿ.ಎನ್ ರೆಡ್ಡಿ, ರಂಗಸ್ವಾಮಿ, ವಿಶ್ವನಾಥ ರಂಗನಗೌಡ, ವೀರಭದ್ರಯ್ಯ, ಪಂಪಣ್ಣ, ಶಬೀರ್, ಭೀಮಣ್ಣ, ಲಕ್ಷ್ಮೀ ನಾರಾಯಣ, ಲಿಂಗನಗೌಡ, ಶರಣಬಸವ ಇದ್ದರು.
ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಮಾಜಿ ಯೋಧರಿಂದ ಹಮ್ಮಿಕೊಂಡಿದ್ದ ಕೇಂದ್ರೀಯ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘವನ್ನು ಇರಕಲ್‌ನ ಜಗದ್ಗುರು ಶಕ್ತಿಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ ಉದ್ಘಾಟಿಸಿದರು. ಕಲ್ಲೂರು ಶಂಕರಾಚಾರ್ಯ ಮಠದ ಶಿವರಾಮಾನಂದ ಭಾರತಿ ಸ್ವಾಮೀಜಿ, ಪ್ರಮುಖರಾದ ವೆಂಕನಗೌಡ, ಧರ್ಮಣ್ಣ, ಕೃಷಣಮೂರ್ತಿ, ಎನ್.ಪಿ.ಎನ್ ರೆಡ್ಡಿ, ರಂಗಸ್ವಾಮಿ, ವಿಶ್ವನಾಥ ರಂಗನಗೌಡ, ವೀರಭದ್ರಯ್ಯ, ಪಂಪಣ್ಣ, ಶಬೀರ್, ಭೀಮಣ್ಣ, ಲಕ್ಷ್ಮೀ ನಾರಾಯಣ, ಲಿಂಗನಗೌಡ, ಶರಣಬಸವ ಇದ್ದರು.
Published on
ರಾಯಚೂರು ರಾಜ್ಯ ಸರ್ಕಾರಗಳಾಗಲಿ, ಕೇಂದ್ರ ಸರ್ಕಾ ರಗಳಾಗಲಿ ಸೈನಿಕರನ್ನು ಪರಿಗಣಿ ಸುತ್ತಿಲ್ಲ. ಸರ್ಕಾರದಲ್ಲಿರುವ ರಾಜಕಾ ರಣಿಗಳು, ವಿಚಾರವಂತರು ಈ ಬಗ್ಗೆ ಯೋಚಿಸಬೇಕು. ನಿರುದ್ಯೋಗಿಗಳಿಗೆ ಸಹಾಯಧನ, ಮಹಿಳೆಯರಿಗೆ
ಬಸ್ ಉಚಿತ ಮಾಡಿರುವ ಸರ್ಕಾರ ರೈತರಿಗೆ, ಸೈನಿಕರಿಗೆ ಏಕೆ ಪ್ರಾತಿನಿಧ್ಯತೆ ನೀಡುತ್ತಿಲ್ಲ ಎಂಬುದನ್ನು ಯೋಚಿಸಬೇಕಿದೆಂದು ಇರಕಲ್‌ನ ಜಗದ್ಗುರು ಶಕ್ತಿಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಮಾಜಿ ಯೋಧರಿಂದ ಹಮ್ಮಿಕೊಂಡಿದ್ದ ಕೇಂದ್ರೀಯ ಅರೆಸೇನಾ ಪಡೆಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟಿಸಿ ಮಾತನಾಡಿದರು. ಯೋಧರು ಸೌಲಭ್ಯಗಳನ್ನು ಸರ್ಕಾರಕ್ಕೆ ಕೇಳಿ ಪಡೆಯುವಂತದ್ದು ದುರಂತವೇ ಸರಿ. ಸರ್ಕಾರದ ಮೈ ಚರ್ಮ ದಪ್ಪವಾಗಿದೆ ಎಂದು ತಿಳಿಸಿದರು.
ಯೋಧರು ತನ್ನ ಸುಖ, ತನ್ನ ಕುಟುಂಬದ ಸುಖ, ತನ್ನ ಪೀಳಿಗೆಯಲ್ಲ ಸುಖವಾಗಿರಬೇಕೆಂಬ ಸ್ವಾರ್ಥವನ್ನು ಹೊಂದಿದ್ದಾನೆ. ಸ್ವಾರ್ಥ ಮತ್ತು ನಿಸ್ವಾರ್ಥದ ಮದ್ಯದಲ್ಲಿ, ತನ್ನವರಿಗೋಸ್ಕರ ತನ್ನ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡುವನು ಸೈನಿಕವೊಬ್ಬನೇ ಗಳಿಕೆಯ ಆಸೆಗಳು ಸೈನಿಕರಲ್ಲಿಲ್ಲ ಎಂದು ಹೇಳಿದರು.
ದೇಶದ ರಕ್ಷಣೆಗೆ ಶ್ರೀಮಂತರು, ರಾಜಕರಣಿಗಳ ಮನೆಯಿಂದ ಮಕ್ಕಳು ಬರುವುದಿಲ್ಲ. ಅತ್ಯಂತ ಕಟ್ಟಕಡೆಯ ಬಡವನ, ಕಾರ್ಮಿಕನ, ರೈತನ ಹಾಗೂ ಶೋಷಿತರ ಮನೆಯಿಂದ ಸೈನಿಕರು ಸೇವೆಗಾಗಿ ಬರುತ್ತಾರೆ. ಅತ್ಯಂತ ತ್ಯಾಗಮಯವಾದ, ಘೋರವಾದ ಬದುಕನ್ನು ಬದುಕುವವರು ಸೈನಿಕರು. ರಾಜ್ಯಮಟ್ಟದಲ್ಲಿ ದೊಡ್ಡ ಸಂಘಟನೆಯಾಗಬೇಕು. ತಾಲೂಕು ಮಟ್ಟಗಳಲ್ಲಿಯೂ ಸಂಘಟನೆ ಬೆಳೆಯಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ದೇಶ ಸುಭದ್ರವಾಗಿರಲು ಸೈನಿಕರ ಸೇವೆಯಿಂದ ಮಾತ್ರ ಸಾಧ್ಯ. ಬಹಳ ಮಹತ್ವವಾದ ಪಾತ್ರವನ್ನು ಸೈನಿಕರು ವಹಿಸುತ್ತಾರೆ. ಅವರನ್ನು ಪೂಜ್ಯ ಭಾವನೆಯಿಂದ ಕಾಣುವುದೇ ದೇಶದ ಸಂಸ್ಕೃತಿಯಾಗಿದೆ ಎಂದರು. ದೇಶ ಇಂದು ಎತ್ತರಕ್ಕೆ ಬೆಳೆದಿದೆ ಎಂದರೆ, ಅದಕ್ಕೆ ಸೈನಿಕರ ಪಾತ್ರ ಬಹಳಷ್ಟು ಮುಖ್ಯವಾಗಿದೆ. ಹಾಗಾಗಿ ದೇಶವನ್ನು ಕಾಯುವಂತಹ ಯುವಕರಿಗೆ ಅವಕಾಶಗಳನ್ನು ಬಹಳಷ್ಟು ಸಿಗಬೇಕಾಗುತ್ತದೆ. ಅವರಿಗೆ ಸಿಗುವಂತಹ ಸೌಲಭ್ಯಗಳನ್ನು ಕೂಡ ಹೆಚ್ಚಿನ ರೀತಿಯಿಂದ ನೀಡಬೇಕಿದೆ. ಸುಭದ್ರವಾದ ದೇಶವನ್ನು ಕಾಯುವಂತಹ ವೀರ ಯೋಧರಿಗೆ ಬೇಕಾದಂತಹ ಹಾಗೂ ಅವರ ಕುಟುಂಬಕ್ಕೆ ಬೇಕಾದಂತಹ ಸೌಲಭ್ಯಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಬೇಕಾಗಿದೆ ಎಂದರು.
ದೇಶವನ್ನ ಕಾಯುವಂತಹ ವೀರ ಯೋಧರಿಗೆ ಇರುವಂತಹ ಕಾನೂನೇ ಬಹಳ ಸಮೃದ್ಧವಾದ ಕಾನೂನಾಗಿ ದೆ. ಅದನ್ನ ಬೇರೆ ಬೇರೆ ಕೆಲಸಗಳಿಗೆ ಹೋಲಿಕೆ ಮಾಡಬಾರದು. ಪಿಂಚಣಿ ಸೇರಿ ಸೈನಿಕರಿಗೆ ಸಿಗುವಂತಹ ಸೌಲಭ್ಯಗಳು ನೀಡುವುದು ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದರು.
ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ ಕಾರ್ಯಾಲಯಕ್ಕೆ ಖಾಲಿ ಇರುವ ಯಾವುದಾದರೂ ಒಂದು ಸರ್ಕಾರಿ ಹಳೆ ಕಟ್ಟಡ ಅಥವಾ ಸರ್ಕಾರಿ ಜಾಗವನ್ನು ಮಂಜೂರು ಮಾಡಬೇಕೆಂಬ ಒತ್ತಾಯವಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಲೂರು ಶಂಕರಾಚಾರ್ಯ ಮಠದ ಶಿವರಾಮಾನಂದ ಭಾರತಿ ಸ್ವಾಮೀಜಿ, ಪ್ರಮುಖರಾದ ವೆಂಕನಗೌಡ, ಧರ್ಮಣ್ಣ, ಕೃಷಣಮೂರ್ತಿ, ಎನ್.ಪಿ.ಎನ್ ರೆಡ್ಡಿ, ರಂಗಸ್ವಾಮಿ, ವಿಶ್ವನಾಥ ರಂಗನಗೌಡ, ವೀರಭದ್ರಯ್ಯ, ಪಂಪಣ್ಣ, ಶಬೀರ್, ಭೀಮಣ್ಣ, ಲಕ್ಷ್ಮೀ ನಾರಾಯಣ, ಲಿಂಗನಗೌಡ, ಶರಣಬಸವ, ಮೋನುಮಿತ್ರ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net