ಪ್ರತಿಯೊಬ್ಬ ಗಣತಿದಾರರ ಮತ್ತು ಮೇಲ್ವಿಚಾರಕರೂ ಶ್ರಮ ವಹಿಸಿ, ನಿಷ್ಠೆಯಿಂದ ಗಣತಿ ಕಾರ್ಯವನ್ನು ಮಾಡಬೇಕು ಎಂದರು. ಇಂದಿನಿಂದ 45 ದಿನಗಳ ವರೆಗೆ ಮನೆ ಮನೆಗಳಿಗೆ ಗಣತಿದಾರರು ಹೋಗಿ ಕಟ್ಟಡಗಳು, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಕುಟುಂಬಗಳ ಬದುಕಿನ ಅಂಶಗಳ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ನಂತರ ಮಾಹಿತಿಗಳನ್ನು ಕ್ರೂಡಿಕರಿಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತದೆ. ಈ ವರದಿಯನ್ನು ಆದರಿಸಿ, ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.