ಸಂಭ್ರಮದಿಂದ ಹೊಸ ವರ್ಷ ಆಚರಣೆ

  ರಾಯಚೂರಿನ ಜಯನಗರ ಬಡಾವಣೆಯ ನಿವಾಸಿಗಳು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಆಚರಣೆ ಮಾಡಿದರು.
ರಾಯಚೂರಿನ ಜಯನಗರ ಬಡಾವಣೆಯ ನಿವಾಸಿಗಳು ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷ ಆಚರಣೆ ಮಾಡಿದರು.
Published on
ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ 2026ರ ಹೊಸ ವರ್ಷವನ್ನು ಸಾರ್ವಜನಿಕರು ಸಡಗರ ಸಂಭ್ರಮದಿಂದ ಬರ ಮಾಡಿಕೊಂಡರು.
ಹೋಟೆಲ್, ರೆಸ್ಟೋರೆಂಟ್ ಹಾಗೂ ಮನೆಗಳಲ್ಲಿ ಜನರು ನೂತನ ಹೊಸ ವರ್ಷಕ್ಕೆ ಕೇಕ್ ಕತ್ತರಿಸಿ ವಿಶಿಷ್ಟ ಭೋಜನ ಸವಿದು ಡಿಜೆ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದರು. ಹೊಸ ವರ್ಷಕ್ಕೆ ಮುಂಚಿತವಾಗಿ ಮಕ್ಕಳು ಬೇಕರಿಗಳಲ್ಲಿ ಕೇಕ್ ಖರೀದಿಸಿದರೆ, ಯುವಕರು ಮದ್ಯದ ಅಂಗಡಿಗಳಲ್ಲಿ ಮದ್ಯ ತೆಗೆದುಕೊಂಡು ಬಾಡೂಟ ಸವಿದು ಹೊಸ ವರ್ಷದ ಸಂಭ್ರಮದಿಂದ ಬರ ಮಾಡಿಕೊಂಡರು.
ಅಂಗಡಿಗಳು, ಬೇಕರಿಗಳು ದೀಪಾಲಂಕಾರದಿಂದ ಶೃಂಗಾರಿಸಲಾಗಿತ್ತು. ಅನೇಕ ಬಡಾವಣೆಗಳಲ್ಲಿ ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷ ಘೋಷಣೆ, ಕೇಕೆಯೊಂದಿಗೆ ಸ್ವಾಗತಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ಹೊಸ ವರ್ಷದ ನಿಮಿತ್ತವಾಗಿಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೋಲಿಸ್ ಬಂದೊಬಸ್ಟ್ ಮಾಡಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net