ಗಣೇಶೋತ್ಸವ ಉತ್ಸಾಹದಿಂದ ಆಚರಿಸಿ

ಸಿಂಧನೂರಿನಲ್ಲಿ ವಿಎಚ್‌ಪಿ, ಬಜರಂಗದಳ ಹಾಗೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಗಣೇಶೋತ್ಸವ ಪ್ರತಿಷ್ಠಾಪನೆ ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಸಿಂಧನೂರಿನಲ್ಲಿ ವಿಎಚ್‌ಪಿ, ಬಜರಂಗದಳ ಹಾಗೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಗಣೇಶೋತ್ಸವ ಪ್ರತಿಷ್ಠಾಪನೆ ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
Published on
ಸಿಂಧನೂರು: ನಗರದಲ್ಲಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಆಯೋಜಿಸಲಾಗುವ ಗಣೇಶೋತ್ಸವ ರಾಜ್ಯದಲ್ಲೇ ಮಾದರಿಯಾಗಿರಲಿದೆ ಎಂದು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯಿಂದ ಗಣಪತಿ ಪ್ರತಿಷ್ಠಾಪನೆ ಪೆಂಡಾಲ್ ನಿರ್ಮಾಣಕ್ಕೆ ಭೂಮಿಪೂಜೆ, ಗೋ ಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ವರ್ಷ ಅಭೂತಪೂರ್ವವಾಗಿ ಗಣೇಶೋತ್ಸವ ಆಯೋಜಿಸಲಾಗಿತ್ತು. ಎಲ್ಲರೂ ಒಗ್ಗೂಡಿ ಉತ್ಸವವನ್ನು ಉತ್ಸಾಹದಿಂದ ಆಚರಿಸಬೇಕೆಂದರು.
ಪ್ರಮುಖರಾದ ವಿಶ್ವನಾಥ್ ಚೌಧರಿ, ದುರ್ಗಾಪ್ರಸಾದ್ ಶರ್ಮಾ, ಮಲ್ಲಿಕಾರ್ಜುನ ಎಚ್.ಕೆ., ಕೆ.ಮರಿಯಪ್ಪ, ರಾಜೇಶ್ ಹಿರೇಮಠ, ಬಸವರಾಜ ಹಿರೇಗೌಡ, ಸುಮಿತ್ ತಡಕಲ್, ಜಗದೀಶ್ ಕೆ., ಆರ್.ಸಿ. ಪಾಟೀಲ್, ಸಂಜಯ್ ಪಾಟೀಲ್, ರಾಮಕೃಷ್ಣ ಬುಲೆಟ್, ರವಿಕುಮಾರ್ ಪನ್ನೂರ್, ಅಮರೇಶ ಕಡಬೂರ್, ಶ್ರೀನಿವಾಸ ಗೋಮರ್ಸಿ, ಶಿವರಾಜ ಉಪ್ಪಲದೊಡ್ಡಿ, ನವೀನ್ ಕಟಾರಿಯಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net