ಸಿರವಾರ: ರಾಯಚೂರು ಜಿಲ್ಲಾ ಉತ್ಸವ ನಿಮಿತ್ತ ತಾಲೂಕು ಪಂಚಾಯಿತಿಯಿಂದ ಶುಕ್ರವಾರ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ತಾಪಂ ಯೋಜನಾಧಿಕಾರಿ ಚನ್ನವೀರಪ್ಪ ಕೋರಿ ಅವರು ಬೈಕ್‌ಗಳಿಗೆ ಸ್ಟಿಕ್ಕರ್ ಹಚ್ಚಿ ಮಾತನಾಡಿ, ರಾಯಚೂರು ನಗರದಲ್ಲಿ ಫೆ.5ರಿಂದ ಮೂರು ದಿನ ನಡೆಯಲಿರುವ ಜಿಲ್ಲಾ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು.
ಜಿಲ್ಲಾ ಉತ್ಸವ ನಿಮಿತ್ತ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ವಿಶೇಷವಾಗಿ ರಾಯಚೂರು ಬೈ ಸ್ಕೈ ಎಂಬ ವಿಶೇಷ ಹೆಲಿಕಾಪ್ಟರ್ ರೈಡ್, ಕೆರೆ ಹಬ್ಬ, ಸಂಗೀತ ಸಂಜೆ, ಮಕ್ಕಳ ಹಬ್ಬ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ ಹಾಗೂ ಪಂಚ ಗ್ಯಾರಂಟಿ ಮೇಳ ಸೇರಿದಂತೆ ಇತರ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿಯೊಬ್ಬರೂ ಭಾಗವಹಿಸಬೇಕು ಎಂದರು.