ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರವನ್ನು ಸರ್ಕಾರಿ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ತಿಮ್ಮಣ್ಣ ಸಾಹುಕಾರ ಕುರುಕುಂದ ಉದ್ಘಾಟಿಸಿದರು. ಪ್ರಾಚಾರ್ಯ ಪಾಂಡುರಂಗ, ಅಭಿವೃದ್ಧಿ ಸಮಿತಿ ಸದಸ್ಯರಾದ ವೀರೇಶ ಸಾನಬಾಳ, ಅಯ್ಯನಗೌಡ ಕಲ್ಲೂರು, ಹನುಮೇಶ ನಾಯಕ, ಶರಣಪ್ಪ ಉಪ್ಪಲದೊಡ್ಡಿ ಇತರರಿದ್ದರು.
ಸಿಂಧನೂರು: ಎನ್ನೆಸ್ಸೆಸ್ ಶಿಬಿರಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಂಡರೆ ಸಾಧನೆ ಮಾಡಲು ಸಾಧ್ಯ ಎಂದು ಉದ್ಯಮಿ ಹಾಗೂ ಸರ್ಕಾರಿ ಪದವಿ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯ ತಿಮ್ಮಣ್ಣ ಸಾಹುಕಾರ ಹೇಳಿದರು.
ತಾಲೂಕಿನ ಗಾಂಧಿನಗರದಲ್ಲಿ ಶನಿವಾರ ಸರ್ಕಾರಿ ಪದವಿ ಕಾಲೇಜು ಹಾಗೂ ರಾಯಚೂರಿನ ಆದಿಕವಿ ಮಹರ್ಷಿ ವಾಲ್ಮೀಕಿ ವಿವಿ ಸಹಯೋಗದಲ್ಲಿ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.ಶಿಬಿರದಲ್ಲಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನ, ಸಮಾಜಮುಖಿ ಚಿಂತನೆ ಕಲಿಯಬಹುದು ಎಂದರು.
ಗಾಂಧಿನಗರದ ಶಿವಾಲಯ ದೇವಸ್ಥಾನದ ಸದಸ್ಯ ಮುಳ್ಳಪುಡಿ ವೆಂಕಟೇಶ್ವರರಾವ, ಉಪ್ಲಪಡಿ ಸತ್ಯನಾರಾಯಣ, ಗ್ರಾಪಂ ಮಾಜಿ ಅಧ್ಯಕ್ಷೆ ಎಂ.ಮಹದೇವಮ್ಮ, ಉಪಾಧ್ಯಕ್ಷೆ ಸರಸ್ವತಿ ಶ್ರೀಕಾಂತ್, ಡಾ.ವೈಜನಾಥ ಸಗರಮಠ, ಕಾರ್ಯಕ್ರಮಾಧಿಕಾರಿ ಸಿದ್ದರಾಮರಡ್ಡಿ, ಡಾ.ಅನಿಲ್‌ಕುಮಾರ ಇತರರಿದ್ದರು.