ಎಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಬಸ್

ಜಾಲಿಹಾಳ ಬಳಿ ಎಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಬಸ್.
ಜಾಲಿಹಾಳ ಬಳಿ ಎಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಬಸ್.
Published on
ಸಿಂಧನೂರು: ತಾಲೂಕಿನ ಕೆ.ಬಸಾಪುರ ಗ್ರಾಮದಿಂದ ಸಿಂಧನೂರಿಗೆ ಕಡೆ ಬರುತ್ತಿದ್ದ ಸಾರಿಗೆ ಬಸ್ ಸೋಮವಾರ ಜಾಲಿಹಾಳ ಬಳಿ ಎಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ್ದು, ಆರೇಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿದ್ದರು. ಕೆ.ಬಸಾಪುರದಿಂದ ತೆರಳುತ್ತಿರುವಾಗ ಮಾರ್ಗಮಧ್ಯೆ ಬಸ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದು ಎಕ್ಸೆಲ್ ಕಟ್ ಆಗಿ ರಸ್ತೆ ಪಕ್ಕದ ಜಮೀನಿನ ಹೊಲಗಾಲುವೆಗೆ ನುಗ್ಗಿದೆ. 
ಆದರೆ, ಸ್ವಲ್ಪ ವಾಲಿದೆ. ತಕ್ಷಣ ಎಲ್ಲರೂ ಕೆಳಗೆ ಇಳಿದಿದ್ದಾರೆ. ಸಮೀಪದಲ್ಲಿ ವಿದ್ಯುತ್ ಕಂಬವಿದ್ದು, ಡಿಕ್ಕಿ ಹೊಡೆದಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net