ಭವನ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಸಿಂಧನೂರಿನ ಬಸ್ ನಿಲ್ದಾಣ ಎದುರುಗಡೆ ನಿರ್ಮಾಣಗೊಂಡಿರುವ ತಾಲೂಕು ಇಂದಿರಾ ಗಾಂಧಿ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳ ಒಕ್ಕೂಟದ ಭವನದ ಆಧುನೀಕರಣ ಕಾಮಗಾರಿಯನ್ನು ಶಾಸಕ ಹಂಪನಗೌಡ ಬಾದರ್ಲಿ ಪರಿಶೀಲಿಸಿದರು.
ಸಿಂಧನೂರಿನ ಬಸ್ ನಿಲ್ದಾಣ ಎದುರುಗಡೆ ನಿರ್ಮಾಣಗೊಂಡಿರುವ ತಾಲೂಕು ಇಂದಿರಾ ಗಾಂಧಿ ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳ ಒಕ್ಕೂಟದ ಭವನದ ಆಧುನೀಕರಣ ಕಾಮಗಾರಿಯನ್ನು ಶಾಸಕ ಹಂಪನಗೌಡ ಬಾದರ್ಲಿ ಪರಿಶೀಲಿಸಿದರು.
Published on
ಸಿಂಧನೂರು: ನಗರದ ಬಸ್ ನಿಲ್ದಾಣ ಎದುರುಗಡೆ ನಿರ್ಮಾಣಗೊಂಡಿರುವ ಇಂದಿರಾ ಗಾಂಧಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳ ಒಕ್ಕೂಟದ ಭವನ ಆಧುನೀಕರಣ ಕಾಮಗಾರಿ ಮತ್ತು ಅದರ ಮುಂಭಾಗದಲ್ಲಿರುವ ಅಕ್ಕ ಕೆಫೆ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಶುಕ್ರವಾರ ಸಂಜೆ ಪರಿಶೀಲಿಸಿದರು. 
ನಂತರ ಮಾತನಾಡಿದ ಶಾಸಕರು, ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಸ್ತ್ರೀಶಕ್ತಿ ಭವನದ ಬಾಕಿ ಕಾಮಗಾರಿ ಸದ್ಯ ಭರದಿಂದ ಸಾಗಿದ್ದು, ಆದಷ್ಟು ಶೀಘ್ರ ಪೂರ್ಣಗೊಳಿಸಿ ವಿವಿಧ ಕಾರ್ಯಕ್ರಮಗಳ ನಡೆಸಲು ನೀಡಬೇಕು. 
ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಜಿಪಂತಿ ಅನುದಾನದಲ್ಲಿ ಅಕ್ಕ ಕೆಫೆ ನಿರ್ಮಿಸಲಾಗಿದೆ. ಇದರಲ್ಲಿ ಗುಣಮಟ್ಟದ ಆಹಾರ ಸಿಗಲಿದೆ ಎಂದರು.
ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಖಾಜಿಮಲಿಕ್ ವಕೀಲ, ಕೆಆರ್‌ಐಡಿಎಲ್ ಜೆಇಗಳಾದ ಮಹಾಂತೇಶ, ಭಾನುತೇಜ್ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net