ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ

ಮುದಗಲ್ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ನಾಗಲಾಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಡಾ.ಶರಣಬಸವ ಪಾಟೀಲ್ ವ್ಯಾಕರನಾಳ ಉದ್ಘಾಟಿಸಿದರು. ಉರ್ದು ಪ್ರೌಢಶಾಲೆ ಮುಖ್ಯಶಿಕ್ಷಕ ಮಹ್ಮದ್ ಶರೀಫ್, ತಾಪಂ ಅಧಿಕಾರಿ ಅಮರೇಶ ಗೌಡೂರು, ಸಿಆರ್‌ಪಿ ರಾಮಚಂದ್ರ ಢವಳೆ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಿಎಸ್‌ಎಸ್‌ಎನ್ ಅಧ್ಯಕ್ಷ ಡಾ.ಶರಣಬಸವರಾಜ ಪಾಟೀಲ್ ವ್ಯಾಕರನಾಳ ಹೇಳಿಕೆ
  • ಹಡಪದ ಅಪ್ಪಣ್ಣ ಜಯಂತಿ
ಮುದಗಲ್: ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ಅಮೂಲ್ಯವಾಗಿದ್ದು, ಗುರುತರ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದು ನಾಗಲಾಪುರ ವಿಎಸ್‌ಎಸ್‌ಎನ್ ಅಧ್ಯಕ್ಷ ಡಾ.ಶರಣಬಸವರಾಜ ಪಾಟೀಲ್ ವ್ಯಾಕರನಾಳ ಹೇಳಿದರು.
ಹಳೇಪೇಟೆ ಸಹಿಪ್ರಾ ಶಾಲೆಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಬದುಕಿನ ಮೌಲ್ಯಗಳನ್ನು ಕಲಿಸುತ್ತಾರೆ. ದೇಶದ ಪ್ರಬುದ್ಧ ನಾಗರಿಕರನ್ನಾಗಿಸಲು ಶ್ರಮಿಸುತ್ತಾರೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.
ಮುಖ್ಯಶಿಕ್ಷಕ ಹುದ್ದೆ ಸ್ವೀಕರಿಸಿದ ವೀರಯ್ಯ ಗೆಜ್ಜಲಗಟ್ಟಿಮಠ ಅವರನ್ನು ಸನ್ಮಾನಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಸಾಬ್ ಬಿಲಕೇರಿ, ಶಿಕ್ಷಕರಾದ ಮಹಾಂತೇಶ ಹಳ್ಳೂರು, ಅಮರಪ್ಪ ಕುಂಬಾರ, ಹುಸೇನ ಸಾಬ್, ಮಹೇಶ ಬೂದಿಹಾಳಮಠ, ಪುರಸಭೆ ಮಾಜಿ ಅಧ್ಯಕ್ಷರಾದ ಅಮೀರಬೇಗ್ ಉಸ್ತಾದ್, ರಜ್ಜಬಲಿ ಟಿಂಗ್ರಿ, ಮಾಜಿ ಉಪಾಧ್ಯಕ್ಷ ಮಹಿಬೂಬಸಾಬ್, ಪ್ರಮುಖರಾದ ರಾಘವೇಂದ್ರ ದೇಶಪಾಂಡೆ, ಸುರೇಶ ಸೇಠ್, ಪರನಗೌಡ ಆದಾಪುರ, ಎಂಡಿ ರಫೀ, ರಾಮನಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net