ಪರೀಕ್ಷೆ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ

ಸಿಂಧನೂರು ಪಿಎಂಶ್ರೀ ಸರ್ಕಾರಿ ಆದರ್ಶ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮಟ್ಟದ ರಾಜ್ಯ ಪುರಸ್ಕಾರ ಪೂರ್ವತಯಾರಿ ಪರೀಕ್ಷಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು.
ಸಿಂಧನೂರು ಪಿಎಂಶ್ರೀ ಸರ್ಕಾರಿ ಆದರ್ಶ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮಟ್ಟದ ರಾಜ್ಯ ಪುರಸ್ಕಾರ ಪೂರ್ವತಯಾರಿ ಪರೀಕ್ಷಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • ಪುರಸ್ಕಾರ
  • ಪೂರ್ವತಯಾರಿ
  • ಪರೀಕ್ಷಾ ಶಿಬಿರ

ಸಿಂಧನೂರು:

ಜಿಲ್ಲಾ ಮಟ್ಟದ ರಾಜ್ಯ ಪುರಸ್ಕಾರ ಪೂರ್ವ ತಯಾರಿ ಪರೀಕ್ಷಾ ಶಿಬಿರ ಮುಂಬರುವ ರಾಜ್ಯ ಪುರಸ್ಕಾರ ಪರೀಕ್ಷೆಗೆ ಮಾರ್ಗದರ್ಶಿಯಾಗುತ್ತದೆ ಎಂದು ಶಿಬಿರದ ನಾಯಕ ಶಶಿಕಾಂತ ದೇಸಾಯಿ ಹೇಳಿದರು.

ಪಿಎಂಶ್ರೀ ಸರ್ಕಾರಿ ಆದರ್ಶ ಶಾಲೆಯಲ್ಲಿ ಭಾನುವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ರಾಯಚೂರು, ಸ್ಥಳೀಯ ಸಂಸ್ಥೆ ಸಿಂಧನೂರು ಹಮ್ಮಿಕೊಂಡಿದ್ದ ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ದಿನದ ಜಿಲ್ಲಾ ಮಟ್ಟದ ರಾಜ್ಯ ಪುರಸ್ಕಾರ ಪೂರ್ವತಯಾರಿ ಪರೀಕ್ಷಾ ಶಿಬಿರದ ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್‌ದಿಂದ ಅತ್ಯುತ್ತಮವಾದ ಕೆಲಸಗಳು ನಡೆಯುತ್ತಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಇಂಥ ಶಿಬಿರದಲ್ಲಿ ಪಾಲ್ಗೊಳ್ಳಬೇಕು ಎಂದರು.
ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಸ್.ಶರಣೇಗೌಡ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಉತ್ತಮ ಸಂಸ್ಕಾರ, ಒಗ್ಗಟ್ಟು, ಸ್ನೇಹ ಸೌಹಾರ್ದತೆ ಬೆಸೆಯುತ್ತದೆ ಎಂದರು. ಪಿಎಂಶ್ರೀ ಸರ್ಕಾರಿ ಆದರ್ಶ ವಿದ್ಯಾಲಯದ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಬಾದರ್ಲಿ, ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ.ಎಸ್.ಶಿವರಾಜ, ಮುಖ್ಯಶಿಕ್ಷಕ ಸಾವನ್ ಮಾತನಾಡಿದರು.
ತೃತೀಯ ಸೋಪಾನ ಪರೀಕ್ಷಾ ಶಿಬಿರದ ನಾಯಕ ಮೋದಿನ್ ಶರೀಫ್, ಎಸ್.ಜಿ.ವಿ.ಅಂಬಣ್ಣ ನಾಯಕ್, ಶರೀಫ್, ಸಿಂಧನೂರು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಬೀರಪ್ಪ ಶಂಭೋಜಿ, ಕೋಶಾಧ್ಯಕ್ಷ ಎನ್.ಬಿ.ಜೋಶಿ, ಜಂಟಿ ಕಾರ್ಯದರ್ಶಿ ಶಂಕರದೇವರು ಹಿರೇಮಠ, ಸಹ ಕಾರ್ಯದರ್ಶಿ ಸಿದ್ದಪ್ಪ ಬಸರಕೋಡ, ಗೈಡ್ಸ್ ವಿಭಾಗ ಶಿಬಿರದ ನಾಯಕಿ ಕಲ್ಪಶ್ರೀ, ಗೈಡ್ಸ್ ಕ್ಯಾಪ್ಟನ್ ಬಸಮ್ಮ ಹಿರೇಮಠ, ಆರತಿ ಸಿಂಧನೂರು, ಶ್ವೇತಾ ಗೊರವರ, ಸೌಜನ್ಯ ಹಿರೇಮಠ, ನಾಗರತ್ನ, ಮಹಿಬೂಬಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net