ರೈತರ ಜಮೀನುಗಳಿಗೆ ರಸ್ತೆ ನಿರ್ಮಿಸಿಕೊಡಿ

ಮುದಗಲ್ ಬಳಿ ಬೆಳಗಾವಿ-ಹೈದರಾಬಾದ್ ಹೆದ್ದಾರಿ ಕಾಮಗಾರಿ ನಿರ್ವಹಣೆ ವಾಹನಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು. ರೈತರಾದ ಶರಣಪ್ಪ, ಈರಣ್ಣ ಅಂಕಸದೊಡ್ಡಿ, ಬೈಲಪ್ಪ, ಅಮರಪ್ಪ, ಶರಣಪ್ಪ, ಕರಿಯಪ್ಪ, ಯಮುನಪ್ಪ ಇತರರಿದ್ದರು.
ಮುದಗಲ್ ಬಳಿ ಬೆಳಗಾವಿ-ಹೈದರಾಬಾದ್ ಹೆದ್ದಾರಿ ಕಾಮಗಾರಿ ನಿರ್ವಹಣೆ ವಾಹನಗಳನ್ನು ತಡೆದು ರೈತರು ಪ್ರತಿಭಟನೆ ನಡೆಸಿದರು. ರೈತರಾದ ಶರಣಪ್ಪ, ಈರಣ್ಣ ಅಂಕಸದೊಡ್ಡಿ, ಬೈಲಪ್ಪ, ಅಮರಪ್ಪ, ಶರಣಪ್ಪ, ಕರಿಯಪ್ಪ, ಯಮುನಪ್ಪ ಇತರರಿದ್ದರು.
Published on
ಮುದಗಲ್: ಮಟ್ಟೂರು ಗ್ರಾಪಂ ವ್ಯಾಪ್ತಿಯ ತೆರಿಭಾವಿ, ಬುದ್ದಿನ್ನಿ, ಗುಡಿಹಾಳ ಗ್ರಾಮಗಳ ಹೊರವಲಯದಲ್ಲಿರುವ ಜಮೀನುಗಳಿಗೆ ತೆರಳಲು ಸೂಕ್ತ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ರೈತರು ಗುರುವಾರ ಹೆದ್ದಾರಿ ಕಾಮಗಾರಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. 
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕೇಂದ್ರ ಸರ್ಕಾರದ ಅನುದಾದಡಿ ಬೆಳಗಾವಿ-ಹೈದರಾಬಾದ್ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, 20ಕ್ಕೂ ಹೆಚ್ಚು ಸರ್ವೇ ನಂ. ಹೊಂದಿರುವ ಜಮೀನುಗಳಿಗೆ ಸುಸಜ್ಜಿತ ರಸ್ತೆ ಇಲ್ಲದೆ ರೈತರು ಪರದಾಡುತ್ತಿದ್ದಾರೆ.
ಶಾಸಕರು, ಜನಪ್ರತಿನಿಧಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರಾದ ಶರಣಪ್ಪ, ಈರಣ್ಣ ಅಂಕಸದೊಡ್ಡಿ, ಬೈಲಪ್ಪ, ಅಮರಪ್ಪ, ಶರಣಪ್ಪ, ಕರಿಯಪ್ಪ, ಯಮುನಪ್ಪ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net