ಅನೇಕರಿಗೆ ಮಾರ್ಗದರ್ಶಕ ಬಿಎಸ್‌ವೈ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಅಂಗವಾಗಿ ಮಸ್ಕಿಯ ಹಳೇ ಬಸ್ ನಿಲ್ದಾಣ ಬಳಿ ಬೀದಿಬದಿ ವ್ಯಾಪಾರಿಗಳಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸಿಹಿ ವಿತರಿಸಿದರು. ಪ್ರಮುಖರಾದ ಶರಣಯ್ಯ ಸೊಪ್ಪಿಮಠ, ಸುರೇಶ ಹರಸೂರು, ಮೌನೇಶ ನಾಯಕ, ಸುಗಣ್ಣ ಬಾಳೆಕಾಯಿ, ಯಲ್ಲೋಜಿರಾವ್ ಕೊರೆಕರ್ ಇದ್ದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಅಂಗವಾಗಿ ಮಸ್ಕಿಯ ಹಳೇ ಬಸ್ ನಿಲ್ದಾಣ ಬಳಿ ಬೀದಿಬದಿ ವ್ಯಾಪಾರಿಗಳಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸಿಹಿ ವಿತರಿಸಿದರು. ಪ್ರಮುಖರಾದ ಶರಣಯ್ಯ ಸೊಪ್ಪಿಮಠ, ಸುರೇಶ ಹರಸೂರು, ಮೌನೇಶ ನಾಯಕ, ಸುಗಣ್ಣ ಬಾಳೆಕಾಯಿ, ಯಲ್ಲೋಜಿರಾವ್ ಕೊರೆಕರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅಭಿಮತ
  • ಮಸ್ಕಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನಾಚರಣೆ
ಮಸ್ಕಿ: ರೈತಪರ ಹೋರಾಟಗಾರ, ಛಲಗಾರ, ರಾಜ್ಯ ಕಂಡ ಅಪರೂಪದ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನೇಕರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿಎಸ್‌ವೈ ಅವರು ರಾಜಕೀಯವಾಗಿ ನನ್ನನ್ನು ಬೆಳೆಸಿದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಶ್ರಮವೇ ಕಾರಣ. ರೈತಪರ ಸರ್ಕಾರ ರಚನೆ ಮಾಡಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ನಂತರ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಬೀದಿಬದಿ ವ್ಯಾಪಾರಿಗಳಿಗೆ, ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಸಿಹಿ, ಹಣ್ಣು ವಿತರಿಸಿದರು. ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಸದಸ್ಯರಾದ ಮೌನೇಶ ಮುರಾರಿ, ಮಲ್ಲಿಕಾರ್ಜುನ ಬ್ಯಾಳಿ, ಭರತಕುಮಾರ, ಚೇತನ್ ಪಾಟೀಲ್, ರಮೇಶ ಗುಡಸಲಿ, ಬಿಜೆಪಿ ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಬಿಜೆಪಿ ಜಿಲ್ಲಾ ಎಸ್ಟಿ ಮೊರ್ಚಾ ಕಾರ್ಯದರ್ಶಿ ಮೌನೇಶ ನಾಯಕ, ಪ್ರಮುಖರಾದ ಡಾ.ಬಿ.ಎಚ್.ದಿವಟರ್, ಪಂಪಣ್ಣ ಗುಂಡಳ್ಳಿ, ಮಲ್ಲಪ್ಪ ಅಂಕುಶದೊಡ್ಡಿ, ಶಿವಶಂಕ್ರಪ್ಪ ಹಳ್ಳಿ, ರಮೇಶ ಉದ್ಬಾಳ, ಬಸವರಾಜ ಬುಕ್ಕಣ್ಣ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net