ಸಹೋದರ ಭಾವನೆ ಇತರ ದೇಶಗಳಿಗೆ ಮಾದರಿ

ಲಿಂಗಸುಗೂರು ಆಡಳಿತ ಸೌಧದಲ್ಲಿ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಸತ್ಯಮ್ಮ, ಉಪತಹಸೀಲ್ದಾರ್ ರಾಘವೇಂದ್ರ ಕೊಪ್ಪದ, ಹಡಪದ ಸಮಾಜದ ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ತಾಲೂಕು ಅಧ್ಯಕ್ಷ ಜಗನ್ನಾಥ ಚಿತಾಪೂರ, ಪ್ರಮುಖರಾದ ಬಸವರಾಜ ಯಲಗಟ್ಟಿ, ಪಾರ್ವತಿ ಹಿರೇಮಠ, ಸುಜಾತಾ, ಸುಚೇತನಾ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಡಪದ ಅಪ್ಪಣ್ಣ ಜಯಂತಿ ಆಚರಣೆ
  • ತಹಸೀಲ್ದಾರ್ ಸತ್ಯಮ್ಮ ಅನಿಸಿಕೆ
ಲಿಂಗಸುಗೂರು: ಹಡಪದ ಅಪ್ಪಣ್ಣನವರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣರ ಚಳವಳಿಯಲ್ಲಿ ಪಾಲ್ಗೊಂಡು ಕಾಯಕ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಿದ್ದರು ಎಂದು ತಹಸೀಲ್ದಾರ್ ಸತ್ಯಮ್ಮ ಹೇಳಿದರು.
ಆಡಳಿತ ಸೌಧದಲ್ಲಿ ಬುಧವಾರ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಜಾಪ್ರಭುತ್ವದ ತಳಹದಿ 12ನೇ ಶತಮಾನದ ಬಸವಣ್ಣನವರ ಕಾಲದಲ್ಲಿ ಆರಂಭವಾಯಿತು. ಅವರ ಸಮಾನತೆ, ಸಹೋದರತ್ವ ಭಾವಗಳನ್ನು ಇತರ ದೇಶಗಳು ಅಳವಡಿಸಿಕೊಂಡಿವೆ. ನಮ್ಮ ಭಾಗದಲ್ಲಿ ಶರಣರ ಚಳುವಳಿ ಆರಂಭವಾಗಿರುವುದೇ ಸಂತೋಷದ ಸಂಗತಿ ಎಂದರು.
ಉಪತಹಸೀಲ್ದಾರ್ ರಾಘವೇಂದ್ರ ಕೊಪ್ಪದ, ಹಡಪದ ಸಮಾಜದ ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ತಾಲೂಕು ಅಧ್ಯಕ್ಷ ಜಗನ್ನಾಥ ಚಿತಾಪೂರ, ಪ್ರಮುಖರಾದ ಚಿದಾನಂದಪ್ಪ, ಸತೀಶ ಕರಡಕಲ್ಲ, ಬಸವರಾಜ ಯಲಗಟ್ಟ, ಆನಂದ, ಆದಪ್ಪ ಕಸಬಾ ಲಿಂಗಸುಗೂರು, ದೊಡ್ಡಪ್ಪ ಗುಡದನಾಳ, ವೀರೇಶ ಗುಂಡಸಾಗರ, ನಾಗರಾಜ ಪೂಲಭಾವಿ, ಶಿವು ನಾಗರಾಳ, ಧನಂಜಯ ಚಿತಾಪೂರ, ನಾಗರಾಜ ಗುಡದನಾಳ, ಸುಜಾತಾ ಶಿರಸ್ತೇದಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net