ಶಿವಭಕ್ತರಿಗೆ ಉಪಾಹಾರದ ವ್ಯವಸ್ಥೆ

ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಭಕ್ತರು ಸರದಿಯಲ್ಲಿ ನಿಂತಿದ್ದರು.
ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಭಕ್ತರು ಸರದಿಯಲ್ಲಿ ನಿಂತಿದ್ದರು.
Published on
ಲಿಂಗಸುಗೂರು: ಮಹಾ ಶಿವರಾತ್ರಿ ನಿಮಿತ್ತ ತಾಲೂಕಿನ ಈಶ್ವರ ದೇವಾಲಯಗಳಲ್ಲಿ ಭಾನುವಾರ ಅಭಿಷೇಕ, ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. 
ಪಟ್ಟಣದ ಈಶ್ವರ ದೇವಾಲಯದಲ್ಲಿ ಭಕ್ತರು ದರ್ಶನ ಪಡೆಯಲು ಅನುಕೂಲವಾಗುವಂತೆ ಕಬ್ಬಿಣದ ಸರಳುಗಳನ್ನು ಅಳವಡಿಸಿ ಸರದಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ ದೇವಸ್ಥಾನ ಸಮಿತಿ ಮಾಡಿತ್ತು. ಬೆಳಗ್ಗೆಯಿಂದಲೇ ಮಕ್ಕಳು, ಮಹಿಳೆಯರು, ಪುರುಷರು ದೇವರ ದರ್ಶನ ಪಡೆದು ಹಣ್ಣು, ಧಾನ್ಯಗಳ ಕಾಳು ದೇವರಿಗೆ ಅರ್ಪಿಸಿದರು.
 ಬೆಳಕು ಗೆಳೆಯರ ಬಳಗ ಭಕ್ತರಿಗೆ 500 ಚೀಲ ಮಂಡಾಳು ತಂದು ಒಗ್ಗರಣೆ ಸಿದ್ಧಪಡಿಸಿದ್ದರು. ಜತೆಗೆ ಬಾಳೆಹಣ್ಣು, ಖರ್ಜೂರ, ದ್ರಾಕ್ಷಿ ಹಣ್ಣು ಹಂಚಿದರು. ಕುಡಿವ ನೀರಿನ ವ್ಯವಸ್ಥೆಯೂ ಮಾಡಲಾಗಿತ್ತು. 
ಶ್ರೀ ಅಮರೇಶ್ವರ : ಗುರುಗುಂಟಾ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗುಂತಗೋಳ ಸಂಸ್ಥಾನದ ರಾಜಾ ಶ್ರೀನಿವಾಸ ನಾಯಕ ಸೇರಿದಂತೆ ಸಾವಿರಾರು ಭಕ್ತರು ಭಕ್ತಿ-ಭಾವದಿಂದ ದರ್ಶನ ಪಡೆದು ಪುನೀತರಾದರು.
ನವಲಿ ಶಂಕರಲಿಂಗ: ನಾರಾಯಣಪುರ ಜಲಾಶಯದ ತಟದಲ್ಲಿರುವ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಭಕ್ತರು ದರ್ಶನ ಪಡೆದರು. ಜಲಾಶಯದ ಹಿನ್ನೀರಿನಲ್ಲಿ ಸ್ನಾನ ಮಾಡಿದ ಭಕ್ತರು ಬೆಳಗ್ಗೆಯಿಂದ ಆಗಮಿಸುತ್ತಿರುವುದು ಕಂಡುಬಂತು. ವಿಶೇಷ ಹೂಗಳಿಂದ ಜಡೆಯ ಶಂಕರಲಿಂಗ ದೇವರಿಗೆ ಅಲಂಕಾರ ಮಾಡಲಾಗಿತ್ತು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net