ಪಕ್ಕದ ತೆಲಂಗಾಣದ ಕೃಷ್ಣಾ ಗ್ರಾಮದ ಗಡಿ ಭಾಗದ ಸರ್ಕಾರಿ ಶಾಲೆಗೆ ರಾಯಚೂರಿನ ಎಡಿಸಿ ಶಿವಾನಂದ ಭಜಂತ್ರಿ ಸೇರಿ ಅನೇಕ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ, ಪರಿಶೀಲನೆ ಮಾಡಿದರು. ಡಿಡಿಪಿಯು ಸೋಮಶೇಖರಪ್ಪ ಹೊಕ್ರಾಣಿ, ತಹಸೀಲ್ದಾರ್ ಸುರೇಶ ವರ್ಮಾ, ಬಿಇಓ ಈರಣ್ಣ ಕೊಸಗಿ,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರವೀಣ್, ಗಡಿನಾಡು ಕನ್ನಡ ಸಂಘದ ಪ್ರಮುಖರಾದ ಅಮರ್ ದೀಕ್ಷಿತ್, ರಾಮಲಿಂಗಪ್ಪ, ನಿಜಮುದ್ದೀನ್, ನಾಗಭೂಷಣ ಇದ್ದರು.
ರಾಯಚೂರು ಪಕ್ಕದ ತೆಲಂಗಾಣದ ಕೃಷ್ಣಾ ಗ್ರಾಮದ ಗಡಿ ಭಾಗದ ಸರ್ಕಾರಿ ಶಾಲೆಗೆ ಎಡಿಸಿ ಶಿವಾನಂದ ಭಜಂತ್ರಿ ಸೇರಿ ಅನೇಕ ಅಧಿಕಾರಿಗಳ ತಂಡ ಸೋಮವಾರ ಭೇಟಿ ನೀಡಿ, ಪರಿಶೀಲನೆ ಮಾಡಿದರು.
ನಂತರ ಮಾತನಾಡಿ, ಫಜಲ್ ಅಲಿ ಕಮಿಷನ್ ವರದಿಯ ಆಧಾರವಾಗಿ 1956 ರಲ್ಲಿ ಭಾಷಾವಾರು ರಾಜ್ಯಗಳು ವಿಂಗಡಣೆಯಾದ ನಂತರ ತೆಲಂಗಾಣ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಕೃಷ್ಣ ಮಂಡಲದಲ್ಲಿನ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮತ್ತು ಶಾಲೆಯ ಸಮಸ್ಯೆಗಳನ್ನು ಆಲಿಸುವುದಕ್ಕಾಗಿ ಸರ್ಕಾರ ಕಳುಹಿಸಿದ್ದು, ಗಡಿನಾಡು ಕನ್ನಡಿಗರು ಎದುರಿಸುತ್ತಿರುವ ಶೈಕ್ಷಣಿಕ ಮತ್ತು ಔದ್ಯೋಗಿಕ ಸಮಸ್ಯೆಗಳನ್ನು ಸಂಘದ ನಾಯಕರು ನಮಗೆ ತಿಳಿಸಿದ್ದಾರೆ.
ವಸತಿ ನಿಲಯ ಸೌಲಭ್ಯ, ಸಾರಿಗೆ ಸೌಲಭ್ಯ, ಪ್ರವೇಶಾತಿ ಅಡೆತಡೆಗಳು, ಇನ್ನಿತರ ಜಿಲ್ಲಾ ಮಟ್ಟದಲ್ಲಿ ಬಗೆಹರಿಯುವ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ನಾವು ಬಗೆಹರಿಸುತ್ತೇವೆ. ಮೀಸಲಾತಿಯಂತಹ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗ ಪರಿಹರಿಸಲಾಗುತ್ತದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಿಡಿಪಿಯು ಸೋಮಶೇಖರಪ್ಪ ಹೊಕ್ರಾಣಿ, ತಹಸೀಲ್ದಾರ್ ಸುರೇಶ ವರ್ಮಾ, ಬಿಇಓ ಈರಣ್ಣ ಕೊಸಗಿ,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರವೀಣ್, ಗಡಿನಾಡು ಕನ್ನಡ ಸಂಘದ ಪ್ರಮುಖರಾದ ಅಮರ್ ದೀಕ್ಷಿತ್, ರಾಮಲಿಂಗಪ್ಪ, ನಿಜಮುದ್ದೀನ್, ನಾಗಭೂಷಣ ಸೇರಿ ಅನೇಕರು ಇದ್ದರು.