ಬೋನ್ ,ಜಾಯಿಂಟ್ ವೀಕ್ ಯಶಸ್ವಿ ಆಚರಣೆ

ರಾಯಚೂರಿನ ಸುವಿಧಾ ಆಸ್ಪತ್ರೆಯಲ್ಲಿ ಡಾ.ಅನಿರುದ್ಧ ಕುಲಕರ್ಣಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಸಂವಾದ ನಡೆಸಿದರು.
ರಾಯಚೂರಿನ ಸುವಿಧಾ ಆಸ್ಪತ್ರೆಯಲ್ಲಿ ಡಾ.ಅನಿರುದ್ಧ ಕುಲಕರ್ಣಿ ಅವರು ಶಾಲಾ ವಿದ್ಯಾರ್ಥಿಗಳಿಗೆ ಸಂವಾದ ನಡೆಸಿದರು.
Published on

ಆರ್ಥೋಪೆಡಿಕ್ ಸೊಸೈಟಿ ವತಿಯಿಂದ ಎಲುಬುಗಳ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಕಳೆದ ದಿನಳಿಂದ ನಗರದ ಸುವಿಧಾ ಆಸ್ಪತ್ರೆಯಲ್ಲಿ ಬೋನ್ ಮತ್ತು ಜಾಯಿಂಟ್ ವೀಕ್ ಕಾರ್ಯಕ್ರಮವನ್ನು ಮಾಡಲಾಯಿತು.

ಡಾ.ಅನಿರುದ್ಧ ಕುಲಕರ್ಣಿ ಹಾಗೂ ಡಾ. ಹರ್ಷ ಪಾಟೀಲ್ ಅವರ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ದೇಹ ಭಂಗಿ, ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾಲು ಹಾಗೂ ಬೆನ್ನೆಲುಬಿನ ಅಂಗವೈಕಲ್ಯದ ಕಾರಣಗಳು ಮತ್ತು ಮುನ್ನೆಚ್ಚರಿಕೆಗಳ ಕುರಿತು ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರಿಗಾಗಿ ಎಲುಬಿನ ಸಾಂದ್ರತೆ ಕುರಿತು ಉಚಿತ ತಪಾಸಣೆ ಹಾಗೂ ಸಮಾಲೋಚನಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್‌ನ ಕಾರ್ಯದರ್ಶಿ ಡಾ. ಹರೀಶ್ ಮೂರ್ತಿ, ಡಾ. ಕನಕ ಚಲಪತಿ, ಡಾ. ನವೀನ್ ಸಗಂಕುಂಟಿ, ಡಾ. ಮೋಹನ್ ಪಾಟೀಲ್ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net