ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನವರೆಗೆ ಉತ್ತಮ ಮಳೆಯಾಗಿದ್ದು, ಹಿರೇಹಳ್ಳ ತುಂಬಿ ಹರಿಯುತ್ತಿದೆ. ಶನಿವಾರ ರಾತ್ರಿ 7.30ಕ್ಕೆ ಜೋರು ಗಾಳಿಯೊಂದಿಗೆ ಆರಂಭವಾದ ಮಳೆ 9 ಗಂಟೆ ವೇಳೆಗೆ ಜೋರಾಯಿತು. ಬೆಳಗ್ಗೆ 6 ಗಂಟೆವರೆಗೂ ಬಿಟ್ಟು ಬಿಟ್ಟು ಮಳೆ ಸುರಿಯಿತು. ಇದರಿಂದ ಸಣ್ಣಪುಟ್ಟ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದ್ದು, ಎರೆ ಹೊಲಗಳ ಒಡ್ಡುಗಳಲ್ಲಿ ನೀರು ಸಂಗ್ರಹಗೊಂಡಿದೆ. ಹಸಿ ಮಳೆಯಾಗಿದ್ದರಿಂದ ರೈತರು ಹರ್ಷಗೊಂಡಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.