ಎರಡನೇ ಬಾರಿಗೆ ಬೊಲೆರೋ ಜೀಪ್ ಜಪ್ತಿ

ಸಿಂಧನೂರಿನಲ್ಲಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಬೊಲೆರೋ ಜೀಪನ್ನು ಗುರುವಾರ ಜಪ್ತಿ ಮಾಡಲಾಯಿತು. ವಕೀಲ ಮಿಥುನ್ ಕುಮಾರ್, ನ್ಯಾಯಾಲಯದ ಸಿಬ್ಬಂದಿ ಅಮರೇಗೌಡ ವಂದಲಿ, ಮಹಾಂತೇಶ ಇದ್ದರು.
ಸಿಂಧನೂರಿನಲ್ಲಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಬೊಲೆರೋ ಜೀಪನ್ನು ಗುರುವಾರ ಜಪ್ತಿ ಮಾಡಲಾಯಿತು. ವಕೀಲ ಮಿಥುನ್ ಕುಮಾರ್, ನ್ಯಾಯಾಲಯದ ಸಿಬ್ಬಂದಿ ಅಮರೇಗೌಡ ವಂದಲಿ, ಮಹಾಂತೇಶ ಇದ್ದರು.
Published on
ಸಿಂಧನೂರು: ಹದಿನೈದು ವರ್ಷವಾದರೂ ಗುತ್ತಿಗೆದಾರರಿಗೆ ಕಾಮಗಾರಿ ಬಿಲ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಬೊಲೆರೋ ಜೀಪನ್ನು ಗುರುವಾರ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮೀಕಾಂತ್ ಜಾನಕಿರಾಮ್ ಮಿಸ್ಕಿನ್ ಅವರ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.
ಈ ಹಿಂದೆ (2009-10) ನೆರೆಹಾವಳಿ ಸಂದರ್ಭ ವೀರಾಪುರ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಿಸಲು 4 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗದಲ್ಲಿ ಗುತ್ತಿಗೆ ಪಡೆದಿದ್ದ ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸಪ್ಪ ಹತ್ತಿಗುಡ್ಡ ಅವರು, ಇಲಾಖೆಯ ನಿಯಮಾನುಸಾರ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆದರೆ ಅಧಿಕಾರಿಗಳು ಬಿಲ್ ಪಾವತಿಸಿಲ್ಲ. ಇದರಿಂದ ಬೇಸತ್ತು ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಂತರ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದರೂ ಸಹ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹಾಗಾಗಿ ವಿಚಾರಣೆ ನಡೆಸಿದ ನ್ಯಾಯಾಲಯ, ಒಟ್ಟು ಬಿಲ್ ಬಾಕಿ ಮೊತ್ತ 2,12,756 ರೂ.ಗೆ 2010ರಿಂದ ಬಡ್ಡಿ ಸೇರಿ ಒಟ್ಟು ರೂ.8,22,516 ರೂ. ಗುತ್ತಿಗೆದಾರರಿಗೆ ನೀಡಬೇಕೆಂದು ಆದೇಶಿಸಿತ್ತು. ಆದರೆ ಹಣ ಪಾವತಿಸದೆ ಇರುವುದರಿಂದ ಜು.15ರಂದು ಉಪ ವಿಭಾಗದ ಎಇಇ ಅವರ ಬೊಲೆರೋ ಜೀಪನ್ನು ಜಪ್ತಿ ಮಾಡಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದ ಅಧಿಕಾರಿಗಳು, ಎರಡು ತಿಂಗಳ ಕಾಲಾವಕಾಶ ಕೇಳಿದ್ದರು. ಕಾಲಮಿತಿಯಲ್ಲಿ ಹಣ ಪಾವತಿಸಲು ವಿಫಲರಾಗಿದ್ದರಿಂದ, ಗುತ್ತಿಗೆದಾರನ ಪರ ವಕೀಲರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.
ನ್ಯಾಯಾಲಯವು ಗುರುವಾರ ಮತ್ತೆ ವಾರಂಟ್ ಹೊರಡಿಸಿದ ಹಿನ್ನೆಲೆಯಲ್ಲಿ ಗುತ್ತಿಗೆದಾರ, ವಕೀಲ ಮಿಥುನ್ ಕುಮಾರ್, ನ್ಯಾಯಾಲಯದ ಸಿಬ್ಬಂದಿ ಅಮರೇಗೌಡ ವಂದಲಿ, ಮಹಾಂತೇಶ ಅವರ ಸಮ್ಮುಖದಲ್ಲಿ ವಾಹನ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net