ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ

ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಜಯ ಗಳಿಸಿದ್ದರಿಂದ ಸಿಂಧನೂರಿನ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಪ್ರಮುಖರಾದ ಚಾಂದ್ ಪಾಷಾ, ಶಿವು ಕುರಕುಂದಿ, ರಮೇಶ್, ರಾಜು ಅಡವಿಬಾವಿ, ಮುತ್ತು ಬರ್ಸಿ, ಸೋಮನಾಥ ಕಲ್ಲೂರು ಇತರರಿದ್ದರು.

Published on
ಸಿಂಧನೂರು: ದೇಶದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಜಯ ಗಳಿಸಿದ್ದರಿಂದ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. 
ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತ ಮತ್ತು ಯೋಜನೆಗಳಿಗೆ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಗಳಲ್ಲಿ ಜನತೆ ಮಣೆ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ಬಲಿಷ್ಟಗೊಂಡು ಎರಡು ವರ್ಷಗಳ ನಂತರ ನಡೆಯುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಹೆಚ್ಚಿನ ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದರು. 
ಗ್ರಾಮೀಣ ಮಂಡಲದ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ, ಮಹಿಳಾ ಘಟಕದ ಅಧ್ಯಕ್ಷೆ ಮಹಾನಂದಾ, ಮುಖಂಡರಾದ ಸಹನಾ ಹಿರೇಮಠ, ಸಿರಾಜ್ ಪಾಷಾ ಮಾತನಾಡಿದರು. 
ಪ್ರಮುಖರಾದ ಶ್ರೀನಿವಾಸ ಮೇಸ್ತ್ರಿ, ಶರಣಪ್ಪ ಬಂಡಿ, ರಾಮದಾಸ್ ಸಾಲಗುಂದಾ, ನಾಗರಾಜ ದೇವರಗುಡಿ, ಮೌನೇಶ್ ಹೊಸಮನಿ, ಮಲ್ಲಿಕಾರ್ಜುನ ರೆಡ್ಡಿ, ಕಾಶಿನಾಥ್ ಹಿರೇಮಠ, ರಮೇಶ್ ಗಾಳಿ, ಶಿವಮ್ಮ, ರೇಣುಕಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net