ತನಿಖೆಗೆ ಒತ್ತಾಯಿಸಿ 23ರಂದು ಬೈಕ್‌ರ‌್ಯಾಲಿ

ಎಸ್.ಮಾರೆಪ್ಪ
ಎಸ್.ಮಾರೆಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಭೂಮಾನಂದ
  • ಕೊಲೆ
  • ವಿರೋಧಿ

ರಾಯಚೂರು: ಭೂಮಾನಂದ ಕೊಲೆ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಆ.23ರಂದು ಹದ್ದಿನಾಳ ಗ್ರಾಮದಿಂದ ನಗರದವರೆಗೆ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಭೂಮಾನಂದ ಕೊಲೆ ವಿರೋಧಿ ಹೋರಾಟ ಸಮಿತಿ ಪ್ರಮುಖ ಎಸ್.ಮಾರೆಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಕಳೆದ 12ವರ್ಷಗಳ ದ್ವೇಷದ ಹಿನ್ನೆಲೆ ಭೂಮಾನಂದ ಕೊಲೆ ನಡೆದಿದ್ದು, ಜಿಲ್ಲೆಯಲ್ಲಿ ಎಸ್ಟಿ ಸಮುದಾಯದ ನಾಲ್ಕು ಜನ ಶಾಸಕರು, ಸಂಸದರಿದ್ದು, ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ, ಹಲ್ಲೆ, ಕೊಲೆ ಘಟನೆಗಳು ನಡೆದರೂ ರಕ್ಷಣೆಯ ಮಾತನಾಡುತ್ತಿಲ್ಲ.

ದೇವದುರ್ಗ ಶಾಸಕಿ ಕರಿಯಮ್ಮ ನಾಯಕ, ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ತಡೆ ಅಧ್ಯಕ್ಷರಾದ ಜಿಲ್ಲಾಧಿಕಾರಿ ಹದ್ದಿನಾಳ ಗ್ರಾಮಕ್ಕೆ ಭೇಟಿ ನೀಡಿ, ಕೊಲೆಯಾದ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ಮಾಡಿಲ್ಲ.

ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಜಿಲ್ಲಾ ಸಮಿತಿ ಸದಸ್ಯರಾಗಿರುವ ರಘುವೀರ ನಾಯಕ ಕೊಲೆ ಘಟನೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಾತನಾಡುತ್ತಿದ್ದು, ಅವರನ್ನು ಕೂಡಲೇ ಸಮಿತಿಯಿಂದ ತೆಗೆದುಹಾಕಬೇಕು.
ಪತ್ರಕರ್ತ ಭೀಮರಾಯ ಹದ್ದಿನಾಳ ನಿರಪರಾಧಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಆದರೆ ಭೀಮರಾಯ ಹದ್ದಿನಾಳ ಈ ಮುಂಚೆ ರಾಜಿಸಂಧಾನ ಸಭೆಯಲ್ಲಿ ಭಾಗಿಯಾಗಿದ್ದು ಅವರ ಪ್ರಚೋದನೆಯೇ ಕಾರಣವಾಗಿದೆ ಎಂದು ದೂರಿದರು.
============
ಫೋಟೊ: 13ರಾಚು03
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net