ಭೂಮಾನಂದ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಿ

ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ  ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಲಿಂಗಸುಗೂರು ಸಹಾಯಕ ಆಯುಕ್ತರ ಕಚೇರಿ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
Published on

ಲಿಂಗಸುಗೂರು: ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ದಲಿತ ಯುವಕ ಭೂಮಾನಂದನ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಹಾಗೂ ಆತನ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ ಎಸಿ ಕಚೇರಿ ಗ್ರಾಮ ಆಡಳಿತಾಧಿಕಾರಿ ಧ್ರುವ ದೇಶಪಾಂಡೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಸುಂಕೇಶ್ವರಹಾಳದಲ್ಲಿ ಆ.4 ರಂದು ಭೂಮಾನಂದನ ಭೀಕರ ಹತ್ಯೆ ಮಾಡಲಾಗಿದೆ. ಕೃತ್ಯ ಮರೆಮಾಚಲು ಅಲ್ಲಿರುವ ಸಿಸಿ ಕ್ಯಾಮರಾ ಜಖಂ ಮಾಡಲಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಭೂಮಾನಂದ ಮಾದಿಗ ಸಮುದಾಯದ ಕೂಲಿ ಕಾರ್ಮಿಕನಾಗಿದ್ದು, ಅದೇ ಗ್ರಾಮದ ಜನರು ಭೂಮಾನಂದನ ಏಳಿಗೆ ಸಹಿಸದೆ ಸಣ್ಣ ವಿಷಯಕ್ಕೂ ಆತನೊಂದಿಗೆ ಜಗಳವಾಡುತ್ತಿದ್ದರು. ದೇವಪ್ಪ ನಾಯಕ ಗುಂಪು ಕಟ್ಟಿಕೊಂಡು ಹಲವಾರು ಬಾರಿ ಹಲ್ಲೆ ನಡೆಸಿದ್ದು, ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳ ಹೇಯ ಕೃತ್ಯದಿಂದ ಭೂಮಾನಂದನ ಕುಟುಂಬ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದೆ. ಕೂಡಲೆ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಭೂಮಾನಂದನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಒತ್ತಾಯಿಸಲಾಯಿತು.
ರಾಜ್ಯ ಸಂಘಟನಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ಮಾದೇಶ ಸರ್ಜಾಪೂರ, ನಾಗರಾಜ ಅಸ್ಕಿಹಾಳ, ಶಿವಪ್ಪ ಹುನಕುಂಟಿ, ಗುರಪ್ಪ ಭೂಪೂರು, ಯಲ್ಲಪ್ಪ ಹಾಲಭಾವಿ, ಹುಸೇನಪ್ಪ ನಾಯಕ, ಹನಮೇಶ ಕುಪ್ಪಿಗುಡ್ಡ, ಮಾಳಪ್ಪ ಗೌಡ, ಪರಮಾನಂದ ಹಾದಿಮನಿ, ಕಾಸಿಂಸಾಬ ಗುಡಿಜಾವೂರು, ಕೋರೆಪ್ಪ, ದುರುಗಪ್ಪ ಹಾಲಭಾವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net