ಜು.19 ರಂದು ಭೋವಿ ವಡ್ಡರ ಜನೋತ್ಸವ

ಯಲ್ಲಪ್ಪ
ಯಲ್ಲಪ್ಪ
Published on
ರಾಯಚೂರು
ಭೋವಿ ವಡ್ಡರ ಗುರುಪೀಠದಿಂದ ಜು.19 ರಂದು ಚಿತ್ರದುರ್ಗದಲ್ಲಿ ಭೋವಿ ವಡ್ಡರ ಜನೋತ್ಸವ ಆಯೋಜಿಸಲಾಗಿದ್ದು , ರಾಜ್ಯ ಎಲ್ಲಾ ಜಿಲ್ಲೆಗಳಿಂದ 10 ಲಕ್ಷ ಜನರು ಭಾಗವಹಿಸುವ ಸಿದ್ದತೆ ಮಾಡಲಾಗಿದೆಂದು ಸಮಾಜದ ಜಿಲ್ಲಾ ಸಂಚಾಲಕ ವಿ.ಎಸ್.ಯಲ್ಲಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೋವಿ ವಡ್ಡರ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ 17 ನೇ ವರ್ಷ ಪಟ್ಟಾಭಿಷೇಕ ಮಹೋತ್ಸ, 28ನೇ ಲಾಂಛನ ದೀಕ್ಷಾ ಮಹೋತ್ಸವ, 40 ನೇ ಜನ್ಮವರ್ಧಂತೋತ್ಸವ ಆಚರಣೆ ಮಾಡಲಾಗುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ, ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು, ಸಚಿವರು, ಮಾಜಿ ಶಾಸಕರುಗಳು ಭಾಗವಹಿಸಲಿದ್ದಾರೆ.
ಸಮಾಜದ ಏಳುಜನ ಶಾಸಕರುಗಳು, ಮಾಜಿ ಸಚಿವರುಗಳು ಭಾಗಿಯಾಗಲಿದ್ದಾರೆ. ಜಿಲ್ಲೆಯಿಂದ 30 ಬಸ್‌ಗಳಲ್ಲಿ 10 ಸಾವಿರ ಜನರು ಚಿತ್ರದುರ್ಗ ತೆರಳಲಿದ್ದೇವೆ ಎಂದರು.
ಈ ಪ್ರಮುಖರಾದ ಹನುಮಂತು ಜೂಕೂರು, ಶಶಿಕಲಾ ಭೀಮರಾಯ, ಹನುಮಂತು ರಾಮನಗರ, ಚಂದ್ರಶೇಖರ, ಚಂದ್ರು ಬುಳ್ಳಾಪುರು, ಮಲ್ಲೇಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net