ದೋಷಾರೋಪಣೆ ಪಟ್ಟಿಯಿಂದ ಭೀಮರಾಯ ಹೆಸರು ಕೈಬಿಡಲಿ

ಎನ್.ರಘುವೀರ್ ನಾಯಕ
ಎನ್.ರಘುವೀರ್ ನಾಯಕ
Published on

ರಾಯಚೂರು

ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ನಡೆದಿರುವ ಕೊಲೆ ಪ್ರಕರಣದಲ್ಲಿ ದುರುದ್ದೇಶದಿಂದ ಪತ್ರಕರ್ತ ಭೀಮರಾಯ ಹದ್ದಿನಾಳ ಹೆಸರನ್ನು ಸೇರ್ಪಡೆ ಮಾಡಿದ್ದು, ದೋಷಾರೋಪಣೆ ಪಟ್ಟಿಯಿಂದ ಕೈ ಬಿಡದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಎಚ್ಚರಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಸುಂಕೇಶ್ವರಹಾಳ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಪತ್ರಕರ್ತ ಭೀಮರಾಯ ಹದ್ದಿನಾಳರನ್ನು 8ನೇ ಆರೋಪಿನ್ನಾಗಿ ಮಾಡಲಾಗಿದೆ, ಎಫ್‌ಐಆರ್ ಮಾಡುವಾಗ ಎರಡು ಬಾರಿ ತಿದ್ದುಪಡಿ ಮಾಡಲಾಗಿದೆ. ಭೀಮರಾಯ ಹದ್ದಿನಾಳ ಅವರು ಗ್ರಾಮವನ್ನು ತೊರೆದು ಸುಮಾರು ವರ್ಷಗಳೇ ಆಗಿವೆ. ಗ್ರಾಮದವರು ಮೃತಪಟ್ಟರೇ ಮಾತ್ರ ಹೋಗಿ ಬರುವುದು, ಸಂಬಂಧವೇ ಇಲ್ಲದ ಪ್ರಕರಣದಲ್ಲಿ ಹೆಸರನ್ನು ಸೇರಿಸುವುದು ಕಾಣದ ಶಕ್ತಿಗಳು ಕೈವಾಡವಿದೆ, ಮಾಧ್ಯಮ ಕ್ಷೇತ್ರದಲ್ಲಿ ಅವರ ಹೆಸರಿಗೆ ಕಳಂಕ ತರಲು ಈ ಕೆಲಸ ಮಾಡಿದ್ದಾರೆ. ಕೂಡಲೇ ಸೂಕ್ತ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯಿಂದ ಹೆಸರನ್ನು ಕೈಬಿಡದಿದ್ದರೆ ಹೋರಾಟ ಮಾಡಲಾಗುತ್ತದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಮು ನಾಯಕ, ಮಲ್ಲೇಶ ನಾಯಕ, ರಂಗಸ್ವಾಮಿ, ರಾಮಕೃಷ್ಣ ನಾಯಕ, ನರಸಿಂಹ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net