ರಾಜಿರಹಿತ ಹೋರಾಟದ ಮೇರು ಪರ್ವತ ಭಗತ್‌ಸಿಂಗ್

ಸಿಂಧನೂರಿನ ಬಸ್ ನಿಲ್ದಾಣದಲ್ಲಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದಿಂದ ಸೋಮವಾರ ಭಗತ್‌ಸಿಂಗ್ ಮತ್ತು ಸಹ ಗೆಳೆಯರ ಹುತಾತ್ಮ ದಿನ ಆಚರಿಸಲಾಯಿತು. ಸಂಘದ ಗೌರವಾಧ್ಯಕ್ಷ ನಾಗರಾಜ ಪೂಜಾರ್, ಅಧ್ಯಕ್ಷ ಬಸವರಾಜ ಕೊಂಡೆ, ಪ್ರಮುಖರಾದ ಶೇಕ್ಷಾವಲಿ, ರಷೀದ್ ಶಿವರಾಜ, ಆನಂದ, ಮಲ್ಲಿಕಾರ್ಜುನ,  ಸಾದಿಕ್ ಮೆಹಬೂಬ್, ಮುಸ್ತಾಕ್, ಚಾಂದ್‌ಬಾಷಾ ಇತರರಿದ್ದರು.

Published on
ಸಿಂಧನೂರು: ಪರಕೀಯರಿಂದ ದೇಶವನ್ನು ಮುಕ್ತಗೊಳಿಸಲು ಹೋರಾಡಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಸೇನಾನಿ ಭಗತ್‌ಸಿಂಗ್ ರಾಜಿರಹಿತ ಹೋರಾಟದ ಮೇರು ಪರ್ವತ ಎಂದು ತಾಲೂಕು ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ನಾಗರಾಜ ಪೂಜಾರ್ ಹೇಳಿದರು.
ನಗರದ ಬಸ್ ನಿಲ್ದಾಣದಲ್ಲಿ ಭಗತ್‌ಸಿಂಗ್ ಆಟೋ ಚಾಲಕರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಭಗತ್‌ಸಿಂಗ್ ಮತ್ತು ಸಹ ಗೆಳೆಯರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಭಗತ್‌ಸಿಂಗ್, ಚಂದ್ರಶೇಖರ್ ಆಜಾದ್, ಸುಖದೇವ್ ಹಾಗೂ ರಾಜಗುರು ಅವರಂಥ ದಿಟ್ಟ ಯುವಕರ ಕೆಚ್ಚೆದೆಯ ಹೋರಾಟ ಬ್ರಿಟಿಷರ ಗುಂಡಿಗೆಯನ್ನೇ ನಡುಗಿಸಿತ್ತು. ಗೊಡ್ಡು ಬೆದರಿಕೆಗಳಿಗೆ ಹೆದರದೆ ಯಾವುದೇ ರಾಜಿಗಳಿಗೆ ಒಳಗಾಗದೆ ಬ್ರಿಟಿಷರಿಗೆ ಸಡ್ಡು ಹೊಡೆದ ಭಗತ್‌ಸಿಂಗ್ ಹಾಗೂ ಸ್ನೇಹಿತರ ಧೈರ್ಯ ಯುವಜನತೆಗೆ ಮಾದರಿಯಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರು ಪ್ರಾಣವನ್ನು ಅರ್ಪಿಸಿದ್ದಾರೆ. ಆದರೆ, ನೈಜ ಇತಿಹಾಸವನ್ನು ಮರೆಮಾಚಲಾಗಿದೆ. ದೇಶಕ್ಕಾಗಿ ದುಡಿಯುವವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಭಗತ್ ಮತ್ತು ಗೆಳೆಯರು ದೇಶದ ಜನರನ್ನು ಬ್ರಿಟಿಷರಿಂದ ವಿಮೋಚನೆಗೊಳಿಸುವುದಷ್ಟೇ ಅಲ್ಲದೇ ಭವಿಷ್ಯದ ಭಾರತವನ್ನು ಕಟ್ಟುವ ಮುನ್ನೋಟ ಹೊಂದಿದ್ದರು ಎಂದರು.
ಸಂಘದ ಅಧ್ಯಕ್ಷ ಬಸವರಾಜ ಕೊಂಡೆ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರೈತ, ದಲಿತ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶವನ್ನು ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು. ಪ್ರಮುಖರಾದ ಶೇಕ್ಷಾವಲಿ, ಬಾಬರ್, ಖಾಜಾಹುಸೇನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net