ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಬಿಜೆಪಿಯ ಜಿಲ್ಲಾ ಪ್ರಧಾನಕಾರ್ಯದರ್ಶಿ ಸಂತೋಷ ರಾಜಗುರು, ಬಿಜೆಪಿಯ ಪ್ರಮುಖ ಪ್ರಸನ್ನ ಪಾಟೀಲ್, ಮಹಾಂತಮ್ಮ ಮಾತನಾಡಿದರು. ದವಸ-ಧಾನ್ಯ, ವಸ್ತ್ರಗಳನ್ನು ನೀಡಿದ ದಾನಿಗಳು, ಗಣ್ಯರನ್ನು ಸನ್ಮಾನಿಸಲಾಯಿತು. ಹನುಮನಾಳದ ಶಿವನಂದೀಶ್ವರ ಸ್ವಾಮಿ ಸಾನ್ನಿಧ್ಯವಹಿಸಿದ್ದರು. ಮಸ್ಕಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೆಹಬೂಬ್‌ಸಾಬ್ ಮುದ್ದಾಪುರ, ತ್ರಿಲೋಕರಡ್ಡಿ ಬೆಂಗಳೂರು, ಚನ್ನಬಸವ ಕಡ್ಡೋಣಿ, ಭೀಮೇಶ ನಾಯಕ, ಕಂಡೋಜಿರಾವ್, ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ ನಾಯಕ ಇತರರಿದ್ದರು.