ಅಮೀನಗಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀ ಜ್ಯೋತಿ ಸಂಜೀವಿನಿ ಗ್ರಾಪಂ ಮಟ್ಟದ ಮಾಸಿಕ ಸಭೆಯಲ್ಲಿ ಶಾಫೀಯಾ ಸಂಜೀವಿನಿ ಸ್ವ ಸಹಾಯ ಗುಂಪಿಗೆ ಸಾಲದ ಚೆಕ್ ವಿತರಿಸಲಾಯಿತು. ತಾಪಂನ ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕ ಈರಪ್ಪ ಗುರಿಕಾರ, ಕಾರ್ಯಕ್ರಮ ವ್ಯವಸ್ಥಾಪಕ ಪ್ರಕಾಶ, ಜಮೀಲಾ ಬೇಗಂ, ಕಾವೇರಿ, ಬಸ್ಮಮ ಇತರರಿದ್ದರು.
ಕವಿತಾಳ: ಮೀನು ಸಾಕಣೆ ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದು ಎಂದು ಮಸ್ಕಿ ತಾಪಂನ ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕ ಈರಪ್ಪ ಗುರಿಕಾರ ಹೇಳಿದರು.
ಅಮೀನಗಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀ ಜ್ಯೋತಿ ಸಂಜಿವಿನಿ ಗ್ರಾಪಂ ಮಟ್ಟದ ಮಾಸಿಕ ಸಭೆಯಲ್ಲಿ ಶಾಫೀಯಾ ಸಂಜೀವಿನಿ ಸ್ವ ಸಹಾಯ ಗುಂಪಿಗೆ ಮತ್ಸೃ ಸಂಜೀವಿನಿ ಯೋಜನೆಯಡಿ ಮೀನು ಸಾಕಣೆ ಮಾಡಲು ಕಡಿಮೆ ಬಡ್ಡಿ ದರದಲ್ಲಿ ಸಾಲದ ಚೆಕ್ ವಿತರಿಸಿ ಮತನಾಡಿದರು.
ತಾಪಂನಿಂದ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಮೀನಗಡದಲ್ಲಿ ಶಾಫೀಯಾ ಸಂಜೀವಿನಿ ಸ್ವ ಸಹಾಯ ಗುಂಪಿಗೆ ಮತ್ಸೃ ಸಂಜೀವಿನಿಯಿಂದ ಮೀನುಗಳನ್ನು ಪಾಲನೆ ಮಾಡಲು ಬಡ್ಡಿ ದರದಲ್ಲಿ ಧನ ಸಹಾಯ ಮಾಡಲಾಗಿದೆ. ಅದರಂತೆ ಪಂಚಾಯಿತಿ ವ್ಯಾಪ್ತಿಯ ಇತರ ಮಹಿಳಾ ಸಂಘಗಳಿಗೆ ಕೂಡ ನೆರವಾಗಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಪ್ರಕಾಶ, ಮುಖ್ಯ ಬರಹಗಾರ್ತಿ ಭಾಗ್ಯವತಿ, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ ಅಯ್ಯಮ್ಮ, ಪಶು ಸಖಿ ಮೋನಮ್ಮ, ಶೀಫಾ ಮಹಿಳಾ ಸಂಘದ ಅಧ್ಯಕ್ಷೆ ಜಮೀಲಾ ಬೇಗಂ ಗುಡಗುಂಟಿ, ಸಂಗೀತಾ ಮಹಿಳಾ ಸಂಘದ ಅಧ್ಯಕ್ಷೆ ಕಾವೇರಿ, ಶಾರದಾ ಮಹಿಳಾ ಸಂಘದ ಅಧ್ಯಕ್ಷೆ ಬಸಮ್ಮ ಇದ್ದರು.