ಲಿಂಗಸುಗೂರಲ್ಲಿ ಶಾಸಕ ಹಾಗೂ ಮಾಜಿ ರೈಲ್ವೆ ಸಚಿವ ಬಸವರಾಜ ಪಾಟೀಲ್ ಯತ್ನಾಳ್‌ಗೆ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ನಾಗರಾಜ ವಿ.ಗಸ್ತಿ, ಉಪಾಧ್ಯಕ್ಷ ಕುಪ್ಪಣ್ಣ ಮಾಣಿಕ್, ರೈತ ಸಂಘದ ತಾಲೂಕ ಅಧ್ಯಕ್ಷ ಸಂಗನಗೌಡ, ವೈದ್ಯ ಆನಂದ ಹೇರೂರು, ರಾಮಕುಮಾರನ ಇದ್ದರು.
ಲಿಂಗಸುಗೂರು: ರಾಯಚೂರು-ಬಾಗಲಕೋಟೆ-ಬೆಳಗಾವಿ ಹಾಗೂ ಬಳ್ಳಾರಿ-ಲಿಂಗಸುಗೂರು ರೈಲ್ವೆ ಮಾರ್ಗಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಬುಧವಾರ ಮಾಜಿ ರೈಲ್ವೆ ಸಚಿವ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕದ ಬಹು ದಿನಗಳ ಕನಸಾಗಿರುವ ಬಳ್ಳಾರಿ-ಲಿಂಗಸುಗೂರು ಹಾಗೂ ಸಿರುಗುಪ್ಪ, ಸಿಂಧನೂರು ನೂತನ ರೈಲ್ವೆ ಮಾರ್ಗದ ಸರ್ವೇ ಕಾರ್ಯ 2018 ಅಕ್ಟೋಬರ್‌ನಲ್ಲಿ ಪೂರ್ಣವಾದ ವರದಿಯನ್ನು 2019 ಜ.4ರಂದು ಸಲ್ಲಿಸಲಾಗಿದೆ.
ರಾಯಚೂರು-ಬಾಗಲಕೋಟೆ-ಬೆಳಗಾವಿ ಹಾಗೂ ಲಿಂಗಸುಗೂರು ನೂತನ ರೈಲ್ವೆ ಮಾರ್ಗದ ಸರ್ವೇ ಕಾರ್ಯ ಅಕ್ಟೋಬರ್ 2011ರಲ್ಲಿ ಪೂರ್ಣವಾದ ವರದಿಯನ್ನು 2012 ಮಾ.1ರಂದು ಸಲ್ಲಿಸಲಾಗಿದೆ. 2 ರೈಲ್ವೆ ಮಾರ್ಗಗಳನ್ನು ನಿರ್ಮಿಸಲು ಶೀಘ್ರ ಕ್ರಮ ಕೈಗೊಂಡು ಈ ಭಾಗದ ಜನರ ಆಸೆ ಈಡೆರಿಸಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ನಾಗರಾಜ ವಿ.ಗಸ್ತಿ, ಉಪಾಧ್ಯಕ್ಷ ಕುಪ್ಪಣ್ಣ ಮಾಣಿಕ್, ರೈತ ಸಂಘದ ತಾಲೂಕು ಅಧ್ಯಕ್ಷ ಸಂಗನಗೌಡ, ವೈದ್ಯ ಆನಂದ ಹೇರೂರು, ರಾಮಕುಮಾರ ಇದ್ದರು.