ಸುಂದರವಾಗಿ ದೇವಸ್ಥಾನದ ಮರು ನಿರ್ಮಾಣ

ಮುದಗಲ್ ಅಂದ್ರೂನಿ ಕಿಲ್ಲಾದಲ್ಲಿರುವ ಹಿರೇವಾಡ ನಾಗರಾಜಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪೂರ ಅವರನ್ನು ದೇವಸ್ಥಾನದ ಧರ್ಮದರ್ಶಿ ಸೋಮನಾಥ ಜೋಷಿ ಸನ್ಮಾನಿಸಿದರು.
ಮುದಗಲ್ ಅಂದ್ರೂನಿ ಕಿಲ್ಲಾದಲ್ಲಿರುವ ಹಿರೇವಾಡ ನಾಗರಾಜಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪೂರ ಅವರನ್ನು ದೇವಸ್ಥಾನದ ಧರ್ಮದರ್ಶಿ ಸೋಮನಾಥ ಜೋಷಿ ಸನ್ಮಾನಿಸಿದರು.
Published on

ಮುದಗಲ್: ಅಂದ್ರೂನಿ ಕಿಲ್ಲಾದಲ್ಲಿರುವ ಹಿರೇವಾಡ ನಾಗರಾಜಸ್ವಾಮಿ ದೇಗುಲಕ್ಕೆ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪೂರ ಬುಧವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಹಳೇಕಾಲದ ದೇವಸ್ಥಾನವನ್ನು ದಕ್ಷಿಣಕನ್ನಡ ಜಿಲ್ಲೆ ಮಾದರಿಯಲ್ಲಿ ಸುಂದರವಾಗಿ ನಿರ್ಮಿಸಿರುವುದು ಸಂತಸ ತಂದಿದೆ. ವಿಶೇಷ ಪುರೋಹಿತ ತಂಡದಿಂದ ನಡೆಯುವ ಆಶ್ಲೇಷ ಬಲಿ ಪ್ರದಾನ ಪೂಜೆ, ಶಾಂತಿ ಹೋಮ, ಮತ್ತು ದೇಗುಲದ ಇತಿಹಾಸದ ಬಗ್ಗೆ ಧರ್ಮದರ್ಶಿ ಸೋಮನಾಥ ಜೋಷಿ ಮಾಹಿತಿ ನೀಡಿದರು.

ದೇವಸ್ಥಾನದ ಸಮಿತಿಯಿಂದ ಮಾಜಿ ಸಚಿವ ಅಮರೇಗೌಡ ಪಾಟೀಲ್ ಅವರನ್ನು ಗೌರವಿಸಲಾಯಿತು. ಧರ್ಮದರ್ಶಿ ಸ್ವಾತಿ ಜೋಷಿ, ಪ್ರಮುಖರಾದ ಅಶೋಕಗೌಡ ಪಾಟೀಲ್, ಅನಿಲ್ ಬುಶೆಟ್ಟಿ, ರಾಜು ಮಾಲಿಪಾಟೀಲ್, ವಿಶ್ವನಾಥ ದೇಸಾಯಿ, ರಾಘವೇಂದ್ರ ಗುಮಾಸ್ತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net