ಆನೆಕಾಲು ರೋಗದ ಎಚ್ಚರ ಇರಲಿ

ದೇವದುರ್ಗದ ತಾಲೂಕು ಆಸ್ಪತ್ರೆಯಲ್ಲಿ ಆಯೊಜಿಸಿದ್ದ ಆನೆಕಾಲು ರೋಗಿಗಳಿಗೆ ಮಾರ್ಬಿಡಿಟಿ ಮ್ಯಾನೇಜ್‌ಮೆಂಟ್ ಕಿಟ್ ವಿತರಿಸಲಾಯಿತು. ವೈದ್ಯಾಧಿಕಾರಿ ಡಾ.ತ್ಯಾಗರಾಜ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಸಿಬ್ಬಂದಿ ಓಂಕಾರ್, ಸುದೀಪ್ ಕುಮಾರ್, ಮನೋಜ್, ರಾಜು, ಆಶಾ ಕಾರ್ಯಕರ್ತೆಯರಾದ ತಾಯಮ್ಮ, ನಾಗಮ್ಮ, ಶಿವಗಂಗಾ, ದೀಪಾ ಇದ್ದರು.

Published on
ದೇವದುರ್ಗ: ಆನೆಕಾಲು ರೋಗದ ಬಗ್ಗೆ ರೋಗಿಗಳು ಎಚ್ಚರಿಕೆವಹಿಸಬೇಕು. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆಗಳನ್ನು ತಪ್ಪದೆ ಪಾಲಿಸಬೇಕು ಎಂದು ಟಿಎಚ್‌ಒ ಬನದೇಶ್ವರ ಹೇಳಿದರು. 
ತಾಲೂಕು ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಆನೆಕಾಲು ರೋಗಿಗಳಿಗೆ ಮಾರ್ಬಿಡಿಟಿ ಮ್ಯಾನೇಜ್‌ಮೆಂಟ್ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಆನೆಕಾಲು ರೋಗಿಗಳು ಪ್ರತಿದಿನ ಉಗುರು ಬೆಚ್ಚಗಿನ ನೀರಿನಲ್ಲಿ ಗಾಯಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಕಾಲು ಕೈ ಬೆರಳುಗಳ ಮಧ್ಯೆ ನಿಧಾನವಾಗಿ ತೊಳೆದು ಒಣಗಿಸಿ ಔಷಧ ಹಚ್ಚಿಕೊಳ್ಳಬೇಕು. ಪ್ರತಿದಿನ ನಿಯಮಿತವಾಗಿ ವ್ಯಾಯಾಮ ಮಾಡಿ ಪೌಷ್ಟಿಕ ಆಹಾರ ಸೇವಿಸಬೇಕು. ಶುದ್ಧ ಕುಡಿವ ನೀರು ಸೇವಿಸಿ ಸರಿಯಾಗಿ ನಿದ್ದೆ ಮಾಡಬೇಕು ಎಂದರು. 
ವೈದ್ಯಾಧಿಕಾರಿ ತ್ಯಾಗರಾಜ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಸಿಬ್ಬಂದಿ ಓಂಕಾರ್, ಸುದೀಪ್ ಕುಮಾರ್, ಮನೋಜ್, ರಾಜು, ಆಶಾ ಕಾರ್ಯಕರ್ತೆಯರಾದ ತಾಯಮ್ಮ, ನಾಗಮ್ಮ, ಶಿವಗಂಗಾ, ದೀಪಾ, ರಹಿಮ್ಯುನಿಸ್ಸಾ, ಸಬೀನಾ, ರೇಖಾ, ರೇಣುಕಾ, ಶಾಂತಾ, ಶ್ರುತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net