ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ವಿಜಾಪುರು ಜಿಲ್ಲೆಯ ತಿಕೋಟಾ ವಿರಕ್ತಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ವಹಿಸಲಿದ್ದಾರೆ. ಯಲಬುರ್ಗ ತಾಲೂಕಿನ ವಣಗೇರಿ ಮುನಗುಳಿ ವಿರಕ್ತಮಠದ ಯಶವಂತದೇವರ ಸಮ್ಮುಖದಲ್ಲಿ 12 ನೇ ಶತಮಾನದ ಬಸವಾದಿ ಶಿವಶರಣ ಕುರಿತು ಉಪನ್ಯಾಸ ನಡೆಯಲಿದೆ.
ಅಧ್ಯಕ್ಷತೆಯನ್ನು ವೀರಭದ್ರ ಸ್ವಾಮೀಜಿ ವಹಿಸಲಿದ್ದಾರೆ. ಮಾಜಿ ಸಂಸದ ಬಿ.ವಿ.ನಾಯಕ ಉದ್ಘಾಟಿಸಲಿದ್ದಾರೆ. ಶಾಸಕರಾದ ಜಿ.ಕರೆಮ್ಮ ನಾಯಕ, ಹಂಪಯ್ಯನಾಯಕ, ಮಾಜಿ ಸಚಿವ ಕೆ.ಶಿವನಗೌಡ ನಾಯಕ ಸೇರಿದಂತೆ ಅನೇಕ ಕಡೆಗಳಿಂದ ಬಸವ ಭಕ್ತರು ಭಾಗಿಯಾಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಶೈಲ ಬಿರಾದಾರ, ಬೆಟ್ಟಪ್ಪ ಕಸ್ತೂರಿ, ಅಯ್ಯನಗೌಡ ದೇವತಗಲ್, ಅಮರಪ್ಪ ಇದ್ದರು.