ಬಸವತತ್ವ ಚಿಂತನಾಗೋಷ್ಠಿಗೆ ಚಾಲನೆ

ಸಿರವಾರದಲ್ಲಿ ಚುಕ್ಕಿ ಪ್ರತಿಷ್ಠಾನದಿಂದ ಆಯೋಜಿಸಿರುವ ಉಮಾಪತಿ ಚುಕ್ಕಿ 50ನೇ ಪುಣ್ಯಸ್ಮರಣೋತ್ಸವ ಹಾಗೂ ಬಸವತತ್ವ ಚಿಂತನಾ ಗೋಷ್ಠಿಗೆ ಎಂಎಲ್ಸಿ ಎನ್.ಎಸ್.ಬೋಸರಾಜು ಚಾಲನೆ ನೀಡಿದರು.
ಸಿರವಾರದಲ್ಲಿ ಚುಕ್ಕಿ ಪ್ರತಿಷ್ಠಾನದಿಂದ ಆಯೋಜಿಸಿರುವ ಉಮಾಪತಿ ಚುಕ್ಕಿ 50ನೇ ಪುಣ್ಯಸ್ಮರಣೋತ್ಸವ ಹಾಗೂ ಬಸವತತ್ವ ಚಿಂತನಾ ಗೋಷ್ಠಿಗೆ ಎಂಎಲ್ಸಿ ಎನ್.ಎಸ್.ಬೋಸರಾಜು ಚಾಲನೆ ನೀಡಿದರು.
Published on
ಸಿರವಾರ: ಪಟ್ಟಣದ ಚುಕ್ಕಿ ಪ್ರತಿಷ್ಠಾನದಿಂದ ಚುಕ್ಕಿ ರುದ್ರಮ್ಮ ಉಮಾಪತೆಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ಉಮಾಪತಿ ಚುಕ್ಕಿ 50ನೇ ಪುಣ್ಯಸ್ಮರಣೋತ್ಸವ ಹಾಗೂ ಬಸವತತ್ವ ಚಿಂತನಾಗೋಷ್ಠಿಗೆ ಗುರುವಾರ ಚಾಲನೆ ನೀಡಲಾಯಿತು. 
ಪಟ್ಟಣದ ಈಶ್ವರ ದೇವಸ್ಥಾನದಿಂದ ಕಲ್ಯಾಣ ಮಂಟಪದವರೆಗೆ ದಾವಣಗೆರೆ ಬಸವ ಕಲಾ ಬಳಗ ತಂಡದ ವಚನ ಭಜನೆಯೊಂದಿಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಬಸವತತ್ವ ಚಿಂತನಾಗೋಷ್ಠಿಯನ್ನು ಎಂಎಲ್ಸಿ ಎನ್. ಎಸ್.ಬೋಸರಾಜು ಉದ್ಘಾಟಿಸಿದರು. 
ಆಳಂದದ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರ ಅನುಭವ ಮಂಟಪ ವಿಶ್ವನಾಥ ಕೋರಣೇಶ್ವರ ಶ್ರೀಗಳು ಮಾತನಾಡಿದರು. ದಾವಣಗೆರೆ ಬಸವ ಕಲಾ ಬಳಗ ತಂಡದಿಂದ ವಚನ ಭಜನೆ, ರಾಯಚೂರು ಮತ್ತು ಮಾನ್ವಿ ಬಸವಕೇಂದ್ರ ಮಹಿಳಾ ತಂಡದಿಂದ ವಚನಗಳು ಹಾಗೂ ನೀರಮಾನ್ವಿ ಬಸವ ಸೈನ್ಯ ಮಕ್ಕಳಿಂದ ಆಕರ್ಷಕ ವಚನ ನೃತ್ಯ ಕಾರ್ಯಕ್ರಮಗಳು ಸುವರ್ಣ ಸಂಭ್ರಮಕ್ಕೆ ಕಳೆ ತಂದವು. 
ಚುಕ್ಕಿ ಪ್ರತಿಷ್ಠಾನದ ಅಧ್ಯಕ್ಷ ಸೂಗಪ್ಪ ಸಾಹುಕಾರ ಚುಕ್ಕಿ, ಮಾನ್ವಿ ಶಾಸಕ ಜಿ. ಹಂಪಯ್ಯನಾಯಕ, ಜಾಗತಿಕ ಮಹಾಸಭಾ ಬೀದರ್ ಜಿಲ್ಲಾ ಅಧ್ಯಕ್ಷ ಬಸವರಾಜ ಧನ್ನೂರು, ಶರಣ ಚಿಂತಕ ಡಾ. ಜೆ.ಎಸ್. ಪಾಟೀಲ್, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ ಸಿರವಾರ ಸಂಚಾಲಕಿ ಜ್ಯೋತಿ ಅಕ್ಕ, ರಾಯಚೂರು ಬಸವಕೇಂದ್ರದ ಅಧ್ಯಕ್ಷ ರಾಚನಗೌಡ ಕೊಳ್ಳೂರು, ಶರಣಭೂಪಾಲ ನಾಡಗೌಡ, ವೀರಭದ್ರಯ್ಯಸ್ವಾಮಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ಕಸಾಪ ಜಿಲ್ಲಾ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಪಿ.ರುದ್ರಪ್ಪ, ಚನ್ನಬಸಣ್ಣ ಮಹಾಜನ ಶೆಟ್ಟಿ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net