ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಮೂಕಪ್ರಾಣಿಗಳಿಗೆ ಸಂಕಷ್ಟ

ಮಾನ್ವಿ ಪಂಪಾ ಉದ್ಯಾನದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ರಾಶಿ.
ಮಾನ್ವಿ ಪಂಪಾ ಉದ್ಯಾನದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ರಾಶಿ.
Published on
ಶರಣಬಸವ ನೀರಮಾನ್ವಿ
ಮಾನ್ವಿ: ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಿ ಹಲವು ವಷರ್ಗಳಾದರೂ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲೆಡೆ ಇನ್ನೂ ಪ್ಲಾಸ್ಟಿಕ್ ಹಾವಳಿ ನಿಂತಿಲ್ಲ.
ಪ್ಲಾಸ್ಟಿಕ್ ಹಾವಳಿ ನಿಯಂತ್ರಿಸಲು ಕೇಂದ್ರ ಪರಿಸರ ಸಚಿವಾಲಯ 2011ರ ಪ್ಲಾಸ್ಟಿಕ್ ನಿರ್ವಹಣೆ ಕಾಯ್ದೆ ಜಾರಿ ಮಾಡಿದೆ. 40 ಮೈಕ್ರಾನ್‌ಗಿಂತ ಹೆಚ್ಚಿರುವ ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ. ಉತ್ಪಾದಿಸುವುದು ಮತ್ತು ಮಾರಾಟ ಮಾಡುವ ನಿಯಮ ಜಾರಿ ಮಾಡಿದೆ. ಅಲ್ಲದೇ ಈ ನಿಯಮ ಪಾಲಿಸದಿದ್ದರೆ ಮಾರಾಟಗಾರರು ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಆದರೆ, ಕಾನೂನು ಜಾರಿಯಾಗಿ ಹಲವು ವರ್ಷಗಳಾದರೂ ಮಾರುಕಟ್ಟೆ, ಚಿಲ್ಲರೆ ಅಂಗಡಿ, ಬೀದಿ ವ್ಯಾಪಾರಿಗಳು ಸೇರಿದಂತೆ ಎಲ್ಲೆಡೆ ಕಳಪೆ ಪ್ಲಾಸ್ಟಿಕ್ ರಾರಾಜಿಸುತ್ತಿದೆ.
ಸಾರ್ವಜನಿಕ ಸ್ಥಳಗಳು, ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ರಾಶಿ ಮಿತಿ ಮೀರಿದೆ. ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ಸ್ಥಳೀಯ ಪುರಸಭೆ ಇತರೆ ಕಚೇರಿಗಳ ಮತ್ತು ಸಾರ್ವಜನಿಕರ ಜವಾಬ್ದಾರಿಯಾಗಿದೆ. ನಿಯಂತ್ರಣಕ್ಕಾಗಿ ಆಗಾಗ ಕಾಟಾಚಾರಕ್ಕೆ ಅಧಿಕಾರಿಗಳು ಅಂಗಡಿಗಳ ಮೇಲೆ ದಾಳಿ ನಡೆಸಿದ್ದು ಬಿಟ್ಟರೆ ಶಾಶ್ವತ ನಿಯಂತ್ರಣದ ಬಗ್ಗೆ ಗಮನಹರಿಸಿಲ್ಲ.
ರಸ್ತೆ ಮತ್ತು ತರಕಾರಿ, ಹಣ್ಣಿನ ಅಂಗಡಿಗಳ ಮುಂದೆ ಬಿದ್ದಿರುವ ಹಾಳಾದ, ಉಳಿದ ಆಹಾರತುಂಬಿ ತಿಪ್ಪೆಗೆ ಎಸೆದ ಕ್ಯಾರಿಬ್ಯಾಗ್‌ಗಳನ್ನು ಜಾನುವಾರುಗಳು ನುಂಗಿದಾಗ ಉಸಿರಾಟದ ತೊಂದರೆಗೆ ಸಿಲುಕಿ ಸಾಯುತ್ತಿವೆ. ಪ್ಲಾಸ್ಟಿಕ್ ಕರುಳು ಸೇರಿದಾಗ ಜೀರ್ಣವಾಗದೇ ಉಳಿಯುತ್ತದೆ. ಇದರಿಂದಲೂ ಜಾನುವಾರುಗಳು ಸಾಯುತ್ತಿವೆ.
ಕಳಪೆ ಪ್ಲಾಸ್ಟಿಕ್ ಬಳಕೆಯಿಂದ ಅಪಾಯಕಾರಿ ವಸ್ತುಗಳು ದೇಹ ಸೇರಿ ಮೂತ್ರ ಹಾಗೂ ಶ್ವಾಸಕೋಶಕ್ಕೆ ಅಪಾಯ ಮಾಡುತ್ತವೆ. ಅಧಿಕ ರಕ್ತದೊತ್ತಡ, ರಕ್ತನಾಳಗಳಲ್ಲಿ ರೋಗಗಳು ಕಾಣಿಸಿಕೊಳ್ಳುತ್ತವೆ. ಕೆಂಪು ಬಣ್ಣದ ಚೀಲಗಳಿಂದ ಮಕ್ಕಳ ಮೂಳೆ ವಿಕಲತೆ, ಕ್ಯಾನ್ಸರ್ ಹಾಗೂ ಗರ್ಭದೊಳಗೆ ಇರುವ ಮಗುವಿಗೆ ತೊಂದರೆಗಳು ಕಾಣಿಸಲಿವೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.
"

ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಅದಷ್ಟು ಬೇಗ ಪುರಸಭೆ ಸಿಬ್ಬಂದಿ ಜತೆ ಅಂಗಡಿಗಳ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಕಳಪೆ ಮಟ್ಟದ ಪ್ಲಾಸ್ಟಿಕ್ ಪಡೆಯಲು ನಿರಾಕರಿಸಬೇಕು. ನಿಯಂತ್ರಣಕ್ಕೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

"

ಪಟ್ಟಣದ ಪಂಪಾ ಉದ್ಯಾನ, ಕಾಂಪ್ಲೆಕ್ಸ್ ಹಿಂದುಗಡೆ, ಚರಂಡಿಗಳಲ್ಲಿ ಮತ್ತು ವಿವಿಧ ಕಡೆ ಪ್ಲಾಸ್ಟಿಕ್ ರಾಶಿ ಕಣ್ಣಿಗೆ ರಾಚುತ್ತಿದೆ. ಪುರಸಭೆಯವರು ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ದನಕರುಗಳ ಸಾವಿನ ಸಂಖ್ಯೆ ಹೆಚ್ಚಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net