ಸಂಭ್ರಮದಿಂದ ಬಕ್ರೀದ್ ಆಚರಣೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ರಾಯಚೂರಿನ ಈದ್ಗಾ ಮೈದಾನದಲ್ಲಿ  ಬಕ್ರೀದ್ ಹಬ್ಬದ ನಿಮಿತ್ತ ಗುರುವಾರ ಮುಸ್ಲಿಂಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ರಾಯಚೂರಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಗುರುವಾರ ಮುಸ್ಲಿಂಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
Published on
ರಾಯಚೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಶ್ರದ್ಧೆ ಭಕ್ತಿಯಿಂದ’ಬಕ್ರೀದ್’ ಹಬ್ಬವನ್ನು ಗುರುವಾರ ಸಂಭ್ರಮದಿಂದ ಆಚರಿಸಿದರು.
ನಗರದ ಈದ್ಗಾ ಮೈದಾನನದಲ್ಲಿ  ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ಮೈದಾನದಲ್ಲಿ ಮಕ್ಕಳು ಕೂಡಾ ವಿಶೇಷ ಉಡುಗೆಯೊಂದಿಗೆ ಸಂಭ್ರಮಿಸಿದರು. 
ಪರಸ್ಪರ ಆಲಂಗಿಸಿ, ಕೈಕುಲುಕಿ ಶುಭಾಶಯ ಹೇಳುತ್ತಿದ್ದ ದಶ್ಯ ಸಾಮಾನ್ಯವಾಗಿತ್ತು. ಬಕ್ರೀದ್ ಹಬ್ಬದ ನಂಬಿಕೆಯಂತೆ ಬೆಳಗ್ಗೆ ಕುರಿಗಳನ್ನು ಬಲಿ ಕೊಟ್ಟು, ಮನೆಗಳಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯ ಮಾಡಿದರು.
ಪ್ರತಿ ವರ್ಷದಂತೆ ಮಹಾನಗರ ಪಾಲಿಕೆಯಿಂದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡಲು ಗ್ರೀನ್ ಮ್ಯಾಟ್ ಅಳವಡಿಕೆ ಮಾಡಲಾಗಿತ್ತು.

ಕಷ್ಟ ಏನೇ ಇದ್ದರೂ ಧರ್ಮ ಪಾಲಿಸುವುದು ಬಿಡುವುದಿಲ್ಲ. ಕುರಿಗಳು ದುಬಾಯಾಗಿವೆ. ಇಂಥ ಸಮಯದಲ್ಲಿ ಖರ್ಚು ಮಾಡುವುದಕ್ಕೆ ಆಗುವುದಿಲ್ಲ. ಸಾಧ್ಯವಿದ್ದಷ್ಟು ಮಟನ್ ಖರೀದಿಸಿ ತಂದು ಬ್ರಕೀದ್ ಹಬ್ಬದ ಸಂಪ್ರದಾಯ ಆಚರಿಸುತ್ತಿದ್ದೇವೆ ಮುಸ್ಲಿಂಮರು ಹೇಳಿದರು.

ಪ್ರತಿ ವರ್ಷ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಜನ ಪ್ರತಿನಿಧಿಗಳು ಭಾಗವಹಿಸಿ ಪರಸ್ಪರ ವಿನಿಮಯ ಮಾಡಿಕೊಳ್ಳತ್ತಿದ್ದರು, ಆದರೆ ರಾಜಕೀಯ ಬೆಳವಣಿಗೆ ನಿಮಿತ್ತ ಈ ಬಾರಿ ಯಾವುದೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸದೆ ಇರುವುದರಿಂದ ಅನೇಕರಲ್ಲಿ ಬೇಸರ ಮೂಡಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net