ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ

ರಾಯಚೂರಿನ ಪ್ರಮಾಣ ಪಿಯು ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಣೆ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು. ಎಸ್ಪಿ ಅರುಣಾಂಗ್ಶು ಗಿರಿ, ಡಿಆರ್ ಡಿವೈಎಸ್ಪಿ ಪ್ರಮಾಣಂದ ಗೋಡ್ಕೆ, ಸಿಪಿಐ ಉಮೇಶ ಕಾಂಬ್ಳೆ, ಪಿಎಸ್‌ಐ ಬಸವರಾಜ ನಾಯಕ ಇದ್ದರು.
ರಾಯಚೂರಿನ ಪ್ರಮಾಣ ಪಿಯು ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಣೆ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು. ಎಸ್ಪಿ ಅರುಣಾಂಗ್ಶು ಗಿರಿ, ಡಿಆರ್ ಡಿವೈಎಸ್ಪಿ ಪ್ರಮಾಣಂದ ಗೋಡ್ಕೆ, ಸಿಪಿಐ ಉಮೇಶ ಕಾಂಬ್ಳೆ, ಪಿಎಸ್‌ಐ ಬಸವರಾಜ ನಾಯಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವರ್ಚ್ಯುವಲ್ ಮೂಲಕ ಸಿಎಂ ಉದ್ಘಾಟನೆ
ರಾಯಚೂರು ನಗರದ ಪ್ರಮಾಣ ಪದವಿ ಪೂವ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಂಗಳವಾರ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಣೆ ವಿರುದ್ಧ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ವರ್ಚ್ಯುವಲ್ ಮೂಲಕ ಉದ್ಘಾಟಿಸಿ ಮಾತನಾಡಿ, ಯುವಜನತೆ ದೇಶದ ಅಮೂಲ್ಯ ಸಂಪತ್ತಾಗಿದ್ದು, ಅವರನ್ನು ಮಾದಕ ವ್ಯಸನದಿಂದ ದೂರವಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮಾದಕ ವಸ್ತುಗಳ ದುರುಪಯೋಗವು ವ್ಯಕ್ತಿಯ ಬದುಕು ಮಾತ್ರವಲ್ಲದೆ ಕುಟುಂಬ ಮತ್ತು ಸಮಾಜದ ನೆಮ್ಮದಿಯನ್ನೂ ಹಾಳುಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಯುವಕರು ಜಾಗೃತರಾಗಿ ಮಾದಕ ವಸ್ತುಗಳ ವಿರುದ್ದ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಸ್ಪಿ ಅರುಣಾಂಗ್ಶು ಗಿರಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ, ಶಿಕ್ಷಣ, ಕುಟುಂಬ ಹಾಗೂ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿವರವಾಗಿ ತಿಳಿಸಿದರು. ಯುವಜನತೆ ಯಾವುದೇ ಸಂದರ್ಭದಲ್ಲೂ ಮಾದಕ ವ್ಯಸನದತ್ತ ಆಕರ್ಷಿತರಾಗದೆ ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ನಡೆಸುವಂತೆ ಸಲಹೆ ನೀಡಿದರು. ಮಾದಕ ವಸ್ತುಗಳ ಅಕ್ರಮ ಚಟುವಟಿಕೆಗಳ ಕುರಿತು ಮಾಹಿತಿ ದೊರೆತಲ್ಲಿ ಗೌಪ್ಯವಾಗಿ ಪೊಲೀಸ್ ಹಾಯವಾಣಿ ಸಂಖ್ಯೆ 1908 ಕ್ಕೆ ಮಾಹಿತಿ ನೀಡುವಂತೆ ಹಾಗೂ ಪೊಲೀಸ್ ಇಲಾಖೆಯ ದೂರವಾಣಿ ಅನ್ವಯಿಕೆಯನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಜೊತೆಗೆ ಮಾದಕ ವಸ್ತುಗಳನ್ನು ತಿರಸ್ಕರಿಸುವುದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಹಾಗೂ ಸಮಾಜವನ್ನು ವ್ಯಸನ ಮುಕ್ತಗೊಳಿಸುವ ಸಂದೇಶಗಳನ್ನೊಳಗೊಂಡ ಕರಪತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಈ ಜಾಗೃತಿ ಅಭಿಯಾನವು ವ್ಯಾಪಕವಾಗಿ ನಡೆದಿದ್ದು, ಜಿಲ್ಲೆಯ 116 ಶಾಲೆಗಳು ಮತ್ತು ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಇದರ ಮೂಲಕ 16,243 ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಡಿಆರ್ ಡಿವೈಎಸ್ಪಿ ಪ್ರಮಾಣಂದ ಗೋಡ್ಕೆ, ಸಿಪಿಐ ಉಮೇಶ ಕಾಂಬ್ಳೆ, ಪಿಎಸ್‌ಐ ಬಸವರಾಜ ನಾಯಕ ಸೇರಿ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net