ಮಾತೃಶಕ್ತಿಯ ಜಾಗೃತಿ ಅವಶ್ಯ

ಸಿಂಧನೂರಿನಲ್ಲಿ ಭಾರತ ವಿಕಾಸ ಪರಿಷತ್ತು ವತಿಯಿಂದ ಕರ್ನಾಟಕ ಉತ್ತರ ಪ್ರಾಂತ ಮಟ್ಟದ ಒಂದು ದಿನದ ಮಾತೃ ಶಕ್ತಿ ಸಂಗಮ ಕಾರ್ಯಕ್ರಮ ನಡೆಯಿತು. ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಪ್ರಾಂತ ಅಧ್ಯಕ್ಷ ಎಸ್.ಎಸ್.ಹಿರೇಮಠ, ಡಾ.ಚನ್ನನಗೌಡ ಆರ್.ಪಾಟೀಲ್,  ಹೇಮಲತಾ ಇದ್ದರು.
ಸಿಂಧನೂರಿನಲ್ಲಿ ಭಾರತ ವಿಕಾಸ ಪರಿಷತ್ತು ವತಿಯಿಂದ ಕರ್ನಾಟಕ ಉತ್ತರ ಪ್ರಾಂತ ಮಟ್ಟದ ಒಂದು ದಿನದ ಮಾತೃ ಶಕ್ತಿ ಸಂಗಮ ಕಾರ್ಯಕ್ರಮ ನಡೆಯಿತು. ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಪ್ರಾಂತ ಅಧ್ಯಕ್ಷ ಎಸ್.ಎಸ್.ಹಿರೇಮಠ, ಡಾ.ಚನ್ನನಗೌಡ ಆರ್.ಪಾಟೀಲ್, ಹೇಮಲತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ
  • ಸಂಸ್ಕೃತಿ
  • ಹೊಣೆಗಾರಿಕೆ
ಸಿಂಧನೂರು: ನಗರದ ಗೋಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾರತ ವಿಕಾಸ ಪರಿಷತ್ತು ವತಿಯಿಂದ ಕರ್ನಾಟಕ ಉತ್ತರ ಪ್ರಾಂತ ಮಟ್ಟದ ಒಂದು ದಿನದ ಮಾತೃ ಶಕ್ತಿ ಸಂಗಮ ಕಾರ್ಯಕ್ರಮ ಭಾನುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಮಾತೃಶಕ್ತಿಯ ಜಾಗೃತಿ ಅವಶ್ಯಕವಾಗಿದೆ ಎಂದ ಅವರು ಭಾರತೀಯ ಸಂಸ್ಕೃತಿಯಲ್ಲಿ ಮಾತೆಯರ ಹೊಣೆಗಾರಿಕೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಭಾರತ ವಿಕಾಸ ಪರಿಷತ್ತಿನ ರಾಷ್ಟ್ರೀಯ ಸಂಚಾಲಕಿ ಸ್ವಾತಿ ಘೋಡೆಕರ್, ಬೆಳಗಾವಿ ಮತ್ತು ವಲಯ ಸಂಚಾಲಕಿ ಜಾನಕಿ ಪುರೋಹಿತ ಅವರು ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು ಡಾ.ಶಕುಂತಲಾ ಪಾಟೀಲ್ ಮತ್ತು ಮಹಿಳೆ ಮತ್ತು ಸಮಾಜ ವಿಷಯದ ಕುರಿತು ವಾಣಿ ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು. ಪ್ರಾಂತ ಅಧ್ಯಕ್ಷ ಎಸ್.ಎಸ್.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳ ಸಾಧಕಿಯರಾದ ಶಕುಂತಲಾ ನಾಗರೆಡ್ಡಪ್ಪ, ಅನ್ನಪೂರ್ಣಮ್ಮ ಮುಳ್ಳೂರು, ಸ್ವಾತಿ ಘೋಡೆಕರ್, ಜಾನಕಿ ಪುರೋಹಿತ ಅವರನ್ನು ಸನ್ಮಾನಿಸಲಾಯಿತು. ಪ್ರಾಂತ ಮಹಿಳಾ ಸಂಚಾಲಕಿ ಸಹನಾ ಹಿರೇಮಠ, ಸಿಂಧನೂರು ಶಾಖೆ ಅಧ್ಯಕ್ಷ ಡಾ.ಚನ್ನನಗೌಡ, ಪ್ರಮುಖರಾದ ಮಂಜುಳಾ ಪಾಟೀಲ್, ಶೋಭಾ ವಸ್ತ್ರದ, ಹೇಮಲತಾ, ಮಧುಮತಿ ದೇಶಪಾಂಡೆ, ಪ್ರಾಂತದ ಬೆಳಗಾವಿ, ಗಂಗಾವತಿ, ರಾಯಚೂರು, ಹೊಸಪೇಟೆ, ಮಾನ್ವಿ ಮತ್ತು ಮಸ್ಕಿ ಶಾಖೆಯ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಾಂತ ಪ್ರಧಾನ ಕಾರ್ಯದರ್ಶಿ ತಿರುಪತಿ ಜೋಶಿ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net