ಡೆಂಘೆ ಜ್ವರದ ಬಗ್ಗೆ ಜಾಗೃತಿ ಅಗತ್ಯ

ದೇವದುರ್ಗ ಯಲ್ಲಾಲಿಂಗ ಕಾಲನಿಯಲ್ಲಿ ಆರೋಗ್ಯ ಇಲಾಖೆ ನೌಕರರು ಮನೆಮನೆ ಭೇಟಿನೀಡಿ ಸೊಳ್ಳೆ ಉತ್ಪನ್ನ ಸ್ಥಳ ಪರಿಶೀಲಿಸಿದರು. ವೈದ್ಯಾಧಿಕಾರಿ ಡಾ.ತ್ಯಾಗರಾಜ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಗೀತಮ್ಮ, ಚನ್ನಬಸಯ್ಯ ಹಿರೇಮಠ, ನಾಗಮ್ಮ ಇತರರಿದ್ದರು.
ದೇವದುರ್ಗ ಯಲ್ಲಾಲಿಂಗ ಕಾಲನಿಯಲ್ಲಿ ಆರೋಗ್ಯ ಇಲಾಖೆ ನೌಕರರು ಮನೆಮನೆ ಭೇಟಿನೀಡಿ ಸೊಳ್ಳೆ ಉತ್ಪನ್ನ ಸ್ಥಳ ಪರಿಶೀಲಿಸಿದರು. ವೈದ್ಯಾಧಿಕಾರಿ ಡಾ.ತ್ಯಾಗರಾಜ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಗೀತಮ್ಮ, ಚನ್ನಬಸಯ್ಯ ಹಿರೇಮಠ, ನಾಗಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ
  • ಅರಿವು
  • ಕಾರ್ಯಕ್ರಮ
ದೇವದುರ್ಗ: ಡೆಂಘೆ ಜ್ವರ ಈಡೀಸ್ ಸೋಂಕಿತ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಹೀಗಾಗಿ ಜನರು ರೋಗ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ಜಾಗೃತಿವಹಿಸಿ ಚಿಕಿತ್ಸೆ ಪಡೆಯಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ ಹೇಳಿದರು.
ಪಟ್ಟಣದ ಹೊಸಕೆರೆ, ಯಲ್ಲಾಲಿಂಗ ಕಾಲನಿ ಹಾಗೂ ನೇತಾಜಿ ಓಣಿಯಲ್ಲಿ ಆಯೋಜಿಸಿದ್ದ ಡ್ರೈ ಡೇ ಅಂಗವಾಗಿ ಮನೆಮನೆ ಭೇಟಿ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಈಡೀಸ್ ಸೊಳ್ಳೆ ಸ್ವಚ್ಛವಾದ ನೀರಿನಲ್ಲಿ ಬೆಳೆದು ಹಗಲಿನಲ್ಲಿ ಕಚ್ಚುತ್ತದೆ. ರೋಗ ಶೀಘ್ರ ಪತ್ತೆ ತ್ವರಿತ ಚಿಕಿತ್ಸೆ ಅಭಿಯಾನ ಕ್ರಮವಾಗಿ ಡ್ರೈಡೇ ಮಾಡಲಾಗುತ್ತಿದೆ. ವಿವಿಧ ಸ್ಥಳಗಳಲ್ಲಿ ನೀರು ನಿಲ್ಲದಂತೆ ನಿಗಾವಹಿಸಿ ನೀರು ಶೇಖರಿಸುವ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಮನೆಯ ಸುತ್ತ ಘನತಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಬೇಸಿಗೆ ಆರಂಭವಾಗಿದ್ದು ನಾನಾ ರೋಗ ಬರುವ ಸಾಧ್ಯತೆಯಿದೆ. ಹೆಚ್ಚು ನೀರು ಕುಡಿಯಬೇಕು. ತೆಳುವಾದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿನಲ್ಲಿ ಕೆಲಸ ಮಾಡುವಾಗ ವಿಶ್ರಾಂತಿ ತೆಗೆದುಕೊಳ್ಳಬೇಕು. ಮಜ್ಜಿಗೆ, ನಿಂಬೆಹಣ್ಣಿನ ಪಾನೀಯಗಳು, ನೀರಿನ ಅಂಶವುಳ್ಳ ಹಣ್ಣುಗಳನ್ನು ತಿನ್ನಬೇಕು ಎಂದರು.
ವೈದ್ಯಾಧಿಕಾರಿ ತ್ಯಾಗರಾಜ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಗೀತಮ್ಮ, ಚನ್ನಬಸಯ್ಯ ಹಿರೇಮಠ, ಓಂಕಾರ್ ಜಂತೇಕಾರ್, ಆಶಾ ಕಾರ್ಯಕರ್ತೆಯರಾದ ನಾಗಮ್ಮ, ದೀಪಾ, ಸುಮಲತಾ, ರೇಣುಕಾ, ದೀಪಿಕಾ, ತಾಯಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net