ಕಸ ಹಾಕಿದ ಜಾಗದಲ್ಲಿ ಸಸಿ ನೆಟ್ಟು ಜಾಗೃತಿ

ಸಿಂಧನೂರಿನ ಮಹಿಬೂಬಿಯಾ ಕಾಲನಿಯಲ್ಲಿ ಗುರುವಾರ ಸಾರ್ವಜನಿಕರು ಕಸ ಎಸೆದ ಜಾಗ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಸಸಿ ನೆಟ್ಟು ಜಾಗೃತಿ ಮೂಡಿಸಲಾಯಿತು. ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಪ್ರಮುಖರಾದ ಆಸೀಫ್, ಚನ್ನವೀರನಗೌಡ, ಬಸವರಾಜ ಹೂವಿನಬಾವಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ನಗರಸಭೆ ವಾಹನದಲ್ಲೇ ಕಸ ಹಾಕಬೇಕು
ಸಿಂಧನೂರು:
ವನಸಿರಿ ಫೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಮಾತನಾಡಿ, ಮನೆ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ರೋಗಾಣುಗಳು ಹರಡದಂತೆ ಸ್ವಚ್ಛವಾಗಿಡುವುದು ಎಲ್ಲರ ಜವಾಬ್ದಾರಿಯಾಗಿದೆ. ಪ್ಲಾಸ್ಟಿಕ್ ಹಾಗೂ ನಿರುಪಯುಕ್ತ ವಸ್ತುಗಳನ್ನು ನಗರಸಭೆ ವಾಹನದಲ್ಲೇ ಹಾಕಬೇಕು. ಇದರಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಬಹುದಾಗಿದೆ. ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿಯೂ ಜಾಗೃತಿ ಮೂಡಿಸಲು ಕಸ ಹಾಕಿದ ಜಾಗದಲ್ಲಿ ಸಸಿಗಳನ್ನು ನೆಡುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರು ಕೈಜೋಡಿಸಬೇಕೆಂದು ಮನವಿ ಮಾಡಿದರು. 
ಪ್ರಮುಖರಾದ ಆಸೀಫ್, ಚನ್ನವೀರನಗೌಡ, ಬಸವರಾಜ ಹೂವಿನಬಾವಿ, ಮುದುಕಪ್ಪ ಹೊಸಳ್ಳಿಕ್ಯಾಂಪ್, ರಘು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net