ಐದು ತಿಂಗಳ ಬಾಕಿ ವೇತನ ಪಾವತಿಗೆ ಆಶಾ ಕಾರ್ಯಕರ್ತೆಯರ ಒತ್ತಾಯ

 ಆಶಾ ಕಾರ್ಯಕರ್ತೆಯರಿಗೆ ಬಾಕಿಯಿರುವ ಐದು ತಿಂಗಳ ಗೌರವ ಧನ ಬಿಡುಗಡೆಗೆವ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮಂಗಳವಾರ ರಾಯಚೂರಿನ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು. ಸಂಘಟನೆ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ, ಎಐಯುಟಿಯುಸಿ ಅಧ್ಯಕ್ಷ ಮಹೇಶ ಚಿಕಲಪರ್ವಿ, ಜಿಲ್ಲಾಧ್ಯಕ್ಷ ಗೌರಮ್ಮ ಹೊಸಮನಿ, ಜಿಲ್ಲಾ ಕಾರ್ಯದರ್ಶಿ ಶೋಭಾ, ಅಣ್ಣವೀರಪ್ಪ ,ಮಲ್ಲಮ್ಮ, ಪ್ರಭಾ, ಲಕ್ಷ್ಮೀ, ದೇವಪ್ಪ, ಶೈಲಜಾ,ಸುಜಾತ ಇದ್ದರು.

Published on
ರಾಯಚೂರು ಆಶಾ ಕಾರ್ಯಕರ್ತೆಯರಿಗೆ ಬಾಕಿಯಿರುವ ಐದು ತಿಂಗಳ ಗೌರವ ಧನ ಬಿಡುಗಡೆಗೆವ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಮಂಗಳವಾರ ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು.
ಆಶಾ ಕಾರ್ಯಕರ್ತೆರುವ ಆರೋಗ್ಯ ಸೇವೆಯಲ್ಲಿ ತೊಡಗಿದ್ದು ಜನವರಿ ತಿಂಗಳಿಂದ ಪ್ರೋತ್ಸಾಹಧನ ಬಿಡುಗಡೆಯಾಗದೇ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಮಸ್ಥಯೆ ಎದುರಿಸುವಚಿತಾಗಿದೆ. ತಕ್ಷಣವೇ ಬಾಕಿ ಪ್ರೋತ್ಸಾಹ ಧನ ಬಿಡುಗಡೆಗೊಳಿಸಬೇಕು. ನಿಶ್ಚಿತ ಗೌರವಧನವಾಗಿ 5 ಸಾವಿರರೂ ಘೋಷಿಸಲಾಗಿದೆ.
ಆದರೆ ಎರಡು ಮೂರು ತಿಂಗಳು ಮಾತ್ರ ಪಾವತಿಯಾಗಿದ್ದು ಉಳಿದ ತಿಂಗಳ ಹಣ ಪಾವತಿಯಾಗದೇ ಗೊಂದಲಕ್ಕೆ ಸಿಲುಕುವಂತಾಗಿದೆ. ಪ್ರತಿ ತಿಂಗಳು ಪಾಸ್ ಬುಕ್‌ನಲ್ಲಿ ಯಾವ ತಿಂಗಳ ನಿಶ್ಚಿತ ಪ್ರೊತ್ಸಾಹ ಧನ, ಗೌರವಧನ ಎಂದು ನಮೂದಿಸಿ ಗೊಂದಲ ನಿವಾರಿಸಬೇಕು. ಕಫದ ಮಾದರಿ ಸಂಗ್ರಹಿಸಲು ಆಶಾ ಕಾರ್ಯಕರ್ತೆಯರಿಗೆ ವಹಿಸಲಾಗಿದೆ. ಅನಗತ್ಯ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ. ಒತ್ತಡ ಹೇರುವದನ್ನು ನಿಲ್ಲಿಸಬೇಕು. ತಾಯಿ ಮರಣದ ಕಾರಣ ನೀಡಿ ನಾಲ್ಕು ಜನ ಆಶಾಕಾರ್ಯಕರ್ತೆಯರನ್ನು ತೆಗೆದುಹಾಕಿದ್ದು ಮರು ನೇಮಕಾತಿ ಮಾಡಿ ಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಎನ್.ಎಸ್.ವೀರೇಶ, ಎಐಯುಟಿಯುಸಿ ಅಧ್ಯಕ್ಷ ಮಹೇಶ ಚಿಕಲಪರ್ವಿ, ಜಿಲ್ಲಾಧ್ಯಕ್ಷ ಗೌರಮ್ಮ ಹೊಸಮನಿ, ಜಿಲ್ಲಾ ಕಾರ್ಯದರ್ಶಿ ಶೋಭಾ, ಅಣ್ಣವೀರಪ್ಪ ,ಮಲ್ಲಮ್ಮ, ಪ್ರಭಾ, ಲಕ್ಷ್ಮೀ, ದೇವಪ್ಪ, ಶೈಲಜಾ,ಸುಜಾತ ಸೇರಿದಂತೆ ವಿವಿಧ ತಾಲೂಕ ಆಶಾ ಕಾರ್ಯಕರ್ತೆಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net