ಸಿಂಧನೂರಿನಲ್ಲಿ ಶಕ್ತಿನಗರದ ಚಿತ್ರ ಕಲಾವಿದ ಪ್ರಕಾಶ್ ಆನೆಗುಂದಿ ಅವರ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಹೊಸಗೌಡ್ರ ಮಾತನಾಡಿದರು.
ಸಿಂಧನೂರು: ಪ್ರಕೃತಿಯೊಂದಿಗೆ ಮಾತನಾಡುವ ಅದೃಷ್ಟವನ್ನು ಚಿತ್ರಕಲಾವಿದರು ಮಾತ್ರ ಪಡೆದಿರುತ್ತಾರೆ ಎಂದು ತುರ್ವಿಹಾಳ ಪಪಂ ಅಧ್ಯಕ್ಷ ಶರಣಪ್ಪ ಹೊಸಗೌಡ್ರು ಹೇಳಿದರು.
ಆದರ್ಶ ಕಾಲನಿಯಲ್ಲಿರುವ ವಿರಿಂಚಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ
ಶಕ್ತಿನಗರದ ಚಿತ್ರ ಕಲಾವಿದ ಪ್ರಕಾಶ್ ಆನೆಗುಂದಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಪ್ರದರ್ಶನದಲ್ಲಿರುವ ಪ್ರತಿಯೊಂದು ಕಲಾಕೃತಿ ಸಂದೇಶ ನೀಡುತ್ತದೆ ಎಂದು ತಿಳಿಸಿದರು.
ಉಪನ್ಯಾಸಕ ಗೋವಿಂದರಾಜ ಬಾರಿಕೇರ್ ಮಾತನಾಡಿ, ಚಿತ್ರ ಕಲಾವಿದರಿಗೆ ಸೃಷ್ಟಿಯ ಎಲ್ಲ ಸಂಗತಿ ಹಾಗೂ ಸಮಾಜದ ಅರಿವು ಇರಬೇಕು. ಸಮಾಜದ ಸ್ವ ಅನುಭವ, ಪರಾನುಭಾವ ಮಾರ್ಗದಿಂದ ಅದರ ಎಲ್ಲ ಸತ್ವ್ತಗಳನ್ನು ಹೀರಿ ಕಲೆಯ ಮೂಲಕ ಪ್ರದರ್ಶಿದಾಗ ಸಾರ್ಥಕತೆಯಾಗುತ್ತದೆ ಎಂದರು.
ಆರ್ಟ್ ಗ್ಯಾಲರಿ ಮುಖ್ಯಸ್ಥ ಶಿವಾನಂದ ಸಾತಿಹಾಳ ಮಾತನಾಡಿ, ಚಿತ್ರ ಕಲಾವಿದರು ನಿರಂತರ ಅಭ್ಯಾಸದೊಂದಿಗೆ ಹೊಸತನವನ್ನು ಹುಟ್ಟು ಹಾಕಬಹುದು.
ಪ್ರಮುಖರಾದ ನಾರಾಯಣಪ್ಪ ಮಾಡಸಿರವಾರ, ಮಲ್ಲಪ್ಪ ಕೆಂಪರೆಡ್ಡಿ, ಚಿತ್ರ ಕಲಾವಿದರಾದ ಉಮೇಶ್ ಪತ್ತಾರ್, ಮಹಮದ್ ಉಸ್ಮಾನ್ ಅಲಿ, ಮಹೇಂದ್ರ, ರಮೇಶ, ರಾಜಸಾಬ್ ಸುರೇಶ್, ಅಂಬಣ್ಣ ಇದ್ದರು.