ಶಿವಶರಣರಿಗೆ ನಿಂದಿಸಿದವನನ್ನು ಬಂಧಿಸಿ

ಬಸವಲಿಂಗಪ್ಪ ಬಾದರ್ಲಿ
ಬಸವಲಿಂಗಪ್ಪ ಬಾದರ್ಲಿ
Published on
ಸಿಂಧನೂರು: ಹನ್ನೆರಡನೇ ಶತಮಾನದ ವಚನಕಾರರಾದ ವಿಶ್ವಗುರು ಬಸವಣ್ಣ ಹಾಗೂ ಶಿವಶರಣೆ ಅಕ್ಕಮಹಾದೇವಿ ಅವರ ಬಗ್ಗೆ ಅಸಂವಿಧಾನಿಕ ಶಬ್ದಗಳನ್ನು ಬಳಿಸಿ ನಿಂದಿಸಿದ ಆರೋಪಿಯನ್ನು ಬಂಧಿಸಿ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕೆಂದು ಬಸವಕೇಂದ್ರ ತಾಲೂಕು ಘಟಕ ಉಪಾಧ್ಯಕ್ಷ ಬಸವಲಿಂಗಪ್ಪ ಬಾದರ್ಲಿ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಆಳವಾಗಿ ಬೇರೂರಿದ್ದ ಜಾತಿ ವ್ಯವಸ್ಥೆ, ಅಸ್ಪಶ್ಯತೆ, ಅಸಮಾನತೆ, ಕಂದಾಚಾರ ಮತ್ತು ಮೂಢನಂಬಿಕೆಯನ್ನು ತೊಲಗಿಸಿ ಸಮಸಮಾಜ ನಿರ್ಮಾಣಕ್ಕಾಗಿ ವಚನ ಕ್ರಾಂತಿ ನಡೆಸಿದವರು. ಬಸವಾದಿ ಶರಣರ ವಿಚಾರ ಮತ್ತು ಸಿದ್ಧಾಂತಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಕೆಲಪಟ್ಟಭದ್ರ ಮೂಲಭೂತವಾದಿಗಳು ಸಲ್ಲದದ ಹೇಳಿಕೆಗಳನ್ನು ಹರಿಬಿಟ್ಟು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. 
ಅದರಂತೆ ರಮಾಕಾಂತ ಎಂ. ಎನ್ನುವ ವ್ಯಕ್ತಿ ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಫೇಸ್ಬುಕ್‌ನಲ್ಲಿ ಅಸಂವಿಧಾನಿಕ ಶಬ್ದಗಳಿಂದ ನಿಂದಿಸಿ ಅಪಮಾನ ಮಾಡಿದ್ದಾರೆ. ಈಗಾಗಲೇ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ರಮಾಕಾಂತ ಎಂ. ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಿ ಸೇರಿ ಆತನ ಹಿಂದೆ ಇರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳ ನಿಯಂತ್ರಣ ಕಾಯ್ದೆಯನ್ನು ರಾಜ್ಯ ಸರ್ಕಾರ ತಕ್ಷಣವೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. 
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖ ಪಿ.ಬಸವರಾಜ ಕುರುಕುಂದ, ಬಸವಕೇಂದ್ರ ತಾಲೂಕು ಘಟಕ ಅಧ್ಯಕ್ಷ ಕೆರೇಗೌಡ ಕುರುಕುಂದ, ಜಾಗತಿಕ ಲಿಂಗಾಯತ ಮಹಾಸಭಾದ ಬಸನಗೌಡ ಬಸಾಪುರ, ಬಸವಕೇಂದ್ರದ ಮುಖಂಡರಾದ ಎಚ್.ಜಿ.ಹಂಪಣ್ಣ, ಚಂದ್ರೇಗೌಡ ಹರಟೇನೂರು, ಎಚ್.ಬಸವರಾಜ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net