ನಿತ್ಯ ತರಗತಿಗೆ ಗೈರು: ರಾಯಚೂರಿನಿಂದ ಲಿಂಗಸಗೂರು, ಮುದಗಲ್, ಹುನಗುಂದ, ಇಲಕಲ್, ಬೆಳಗಾವಿ, ಕೊಲ್ಲಾಪುರ ಸೇರಿದಂತೆ ವಿವಿಧ ಡಿಪೋದ ಬಸ್‌ಗಳನ್ನು ತಡೆಯಲಾಗಿತ್ತು. ಲಿಂಗಸುಗೂರಿಗೆ ಮಗುವಿನ ಚಿಕಿತ್ಸೆಗಾಗಿ ತೆರಳುತ್ತಿದ್ದ ಸುಬಾನಾ ಎನ್ನುವ ಮಹಿಳೆ ಬಸ್‌ಗಾಗಿ ಪರದಾಡಿದರು. ಇನ್ನೂ ಸರ್ಕಾರಿ, ಖಾಸಗಿ ನೌಕರರು, ಕಾರ್ಯಕ್ರಮಗಳಿಗೆ ತೆರಳುತ್ತಿರುವವರು ವಿದ್ಯಾರ್ಥಿಗಳಿಗೆ ತಾಕೀತು ಮಾಡಿದರೆ, ನಮಗೆ ನಿತ್ಯ ತರಗತಿಗಳು ತಪ್ಪುತ್ತಿವೆ ಎಂದು ಅಳಲು ತೋಡಿಕೊಂಡರು.