ಕೆಂಡದಂತಹ ಬಿಸಿಲಿಗೆ ಮೀನುಗಳು ಬಲಿ ?

ಮುದಗಲ್‌ನ ಹಳೇಪೇಟೆ ಕೆರೆಯಲ್ಲಿ ಸತ್ತು ದಡ ಸೇರಿರುವ ಮೀನುಗಳ ರಾಶಿ.
ಮುದಗಲ್‌ನ ಹಳೇಪೇಟೆ ಕೆರೆಯಲ್ಲಿ ಸತ್ತು ದಡ ಸೇರಿರುವ ಮೀನುಗಳ ರಾಶಿ.
Published on

ಪ್ರಮುಖ ಮುಖ್ಯಾಂಶಗಳು

  • ಮುದಗಲ್ ಹಳೇಪೇಟೆ ಕೆರೆಯಲ್ಲಿ ಮಾರಣ ಹೋಮ
ಮುದಗಲ್: ತಾಪಮಾನ ಹೆಚ್ಚಳದಿಂದ ಪಟ್ಟಣದ ಹಳೇಪೇಟೆ ಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣ ಹೋಮವಾಗಿದ್ದು, ಸಾರ್ವಜನಿಕರಲ್ಲಿ ಅತಂಕ ಮೂಡಿಸಿದೆ. 
ಹಳೇಪೇಟೆ ಕೆರೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಮೀನು ಮರಿಗಳನ್ನು ಹಾಕಲಾಗಿದ್ದು, ಟೆಂಡರ್ ನೀಡಲಾಗಿದೆ. ಆದರೆ, ದಿನೇದಿನೆ ಹೆಚ್ಚುತ್ತಿರುವ ಬಿಸಿಲಿನಿಂದಾಗಿ ಮೀನುಗಳು ಸಾಯುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ತೇಲುತ್ತ ದಡ ಸೇರುತ್ತಿವೆ. ಕೆಲ ದಿನಗಳಿಂದ ಮೀನುಗಳು ಸಾಯುತ್ತಿದ್ದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿಲ್ಲ. ಇನ್ನೊಂದೆಡೆ ಸತ್ತ ಮೀನುಗಳಿಂದ ದುರ್ವಾಸನೆ ಹರಡುತ್ತಿದ್ದು, ಸುತ್ತಲಿನ ಜನರು ಮನೆ ಬಾಗಿಲು, ಕಿಟಕಿ ಬಂದ್ ಮಾಡಿಕೊಂಡು ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರಗೆ ಬಂದರೆ ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ. 
ಮಟ್ಟೂರು , ಸಂತೆಕೆಲ್ಲೂರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಬೈಕ್ ಸವಾರರು ಹಾಗೂ ಪಾದಚಾರಿಗಳು ಸಹ ಸಮಸ್ಯೆ ಎದುರಿಸುತ್ತಿದ್ದಾರೆ. ರಾತ್ರಿ ವೇಳೆ ಕ್ರಿಮಿಕೀಟಗಳು ದಾಳಿ ಇಡುತ್ತಿದ್ದು, ಜನರು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಗಬ್ಬುನಾರುತ್ತಿರುವ ಕೆರೆ ಸ್ವಚ್ಛತೆಗೆ ಪುರಸಭೆ ಅಥವಾ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುತುವರ್ಜಿವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net